ಬೆಂಗಳೂರು : ಆನೇಕಲ್ ಪುರಸಭೆ ಕೌನ್ಸಿಲರ್ ರವಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸದಂತೆ ರೊಚ್ಚಿಗೆದ್ದ ರವಿ ಸಂಬಂಧಿಕರು ಶಂಕಿತರ ಮನೆ ಮೇಲೆ ದಾಳಿ ಮಾಡಿದ್ದಾರೆ. ರಮೇಶ್, ಹರೀಶ್ ಎಂಬುವರ ಮನೆ ಮೇಲೆ ದಾಳಿ ಮಾಡಿ, ಮನೆಯ ಕಿಟಕಿ ಗಾಜು ಹಾಗೂ ವಸ್ತುಗಳೆಲ್ಲ ಪುಡಿಪುಡಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ದೌಡಾಯಿಸಿದ್ದಾರೆ.
ಆನೇಕಲ್ ಪಟ್ಟಣದಲ್ಲಿ ಪುರಸಭೆಯ 22ನೇ ವಾರ್ಡ್ ಸದಸ್ಯ ರವಿ ಎಂಬುವರನ್ನು ಬುಧವಾರ (ಜುಲೈ 24) ರಾತ್ರಿ ಮಾರಕಾಸ್ತ್ರಗಳಿಂದ ಹಂತಕರು ಕೊಚ್ಚಿ ಹತ್ಯೆ ಮಾಡಿದ್ದರು. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಭೇಟಿ ನೀಡಿ ರವಿ ಕೊಲೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಇನ್ನು ಹಳೆ ದ್ವೇಷ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ರವಿ ಮನೆಯಿಂದ ಆಚೆ ಬಂದ ಕೂಡಲೇ ಮಾರಕಾಸ್ತ್ರಗಳಿಂದ ಹಂತಕರು ದಾಳಿ ಮಾಡಿ ಧರ-ಧರನೆ ಎಳೆತಂದು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈಗಾಗಲೇ ಹತ್ಯೆ ಮಾಡಿ ಪರಾರಿಯಾಗಿರುವ ಕೊಲೆ ಆರೋಪಿಗಳ ಪತ್ತೆ ಹಚ್ಚಲು ಐವರು ಇನ್ಸ್ಪೆಕ್ಟರ್ಗಳ ತಂಡ ರಚನೆ ಮಾಡಲಾಗಿದ್ದು, ಹಂತಕರ ಸುಳಿವು ಪತ್ತೆ ಹಚ್ಚಿ ಅರೆಸ್ಟ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆ ನಂತರ ರವಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಿದೆ.
ಇದನ್ನೂ ಓದಿ : ವಿಧಾನಸಭೆ ಕಲಾಪ ಆರಂಭ ಆಗ್ತಿದ್ದಂತೆ ಮುಂದುವರೆದ ಮುಡಾ ಕೋಲಾಹಲ..!
Post Views: 78