Download Our App

Follow us

Home » ಅಪರಾಧ » ಆನೇಕಲ್​​​ ಪುರಸಭೆ ಕೌನ್ಸಿಲರ್ ರವಿ​​ ಹತ್ಯೆ ಕೇಸ್​ – ಶಂಕಿತರ ಮನೆ ಮೇಲೆ ದಾಳಿ ಮಾಡಿದ ಸಂಬಂಧಿಕರು..!

ಆನೇಕಲ್​​​ ಪುರಸಭೆ ಕೌನ್ಸಿಲರ್ ರವಿ​​ ಹತ್ಯೆ ಕೇಸ್​ – ಶಂಕಿತರ ಮನೆ ಮೇಲೆ ದಾಳಿ ಮಾಡಿದ ಸಂಬಂಧಿಕರು..!

ಬೆಂಗಳೂರು : ಆನೇಕಲ್​​​ ಪುರಸಭೆ ಕೌನ್ಸಿಲರ್​​ ರವಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸದಂತೆ ರೊಚ್ಚಿಗೆದ್ದ ರವಿ ಸಂಬಂಧಿಕರು ಶಂಕಿತರ ಮನೆ ಮೇಲೆ ದಾಳಿ ಮಾಡಿದ್ದಾರೆ. ರಮೇಶ್, ಹರೀಶ್ ಎಂಬುವರ ಮನೆ ಮೇಲೆ ದಾಳಿ ಮಾಡಿ, ಮನೆಯ ಕಿಟಕಿ ಗಾಜು ಹಾಗೂ ವಸ್ತುಗಳೆಲ್ಲ ಪುಡಿಪುಡಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಆನೇಕಲ್​​​​ ಪೊಲೀಸರು ದೌಡಾಯಿಸಿದ್ದಾರೆ.

ಆನೇಕಲ್​​ ಪಟ್ಟಣದಲ್ಲಿ ಪುರಸಭೆಯ 22ನೇ ವಾರ್ಡ್‌ ಸದಸ್ಯ ರವಿ ಎಂಬುವರನ್ನು ಬುಧವಾರ (ಜುಲೈ 24) ರಾತ್ರಿ ಮಾರಕಾಸ್ತ್ರಗಳಿಂದ ಹಂತಕರು ಕೊಚ್ಚಿ ಹತ್ಯೆ ಮಾಡಿದ್ದರು. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್​ಪಿ ಸಿ.ಕೆ.ಬಾಬಾ ಭೇಟಿ ನೀಡಿ ರವಿ ಕೊಲೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಇನ್ನು ಹಳೆ ದ್ವೇಷ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ರವಿ ಮನೆಯಿಂದ ಆಚೆ ಬಂದ ಕೂಡಲೇ ಮಾರಕಾಸ್ತ್ರಗಳಿಂದ ಹಂತಕರು ದಾಳಿ ಮಾಡಿ ಧರ-ಧರನೆ ಎಳೆತಂದು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈಗಾಗಲೇ ಹತ್ಯೆ ಮಾಡಿ ಪರಾರಿಯಾಗಿರುವ ಕೊಲೆ ಆರೋಪಿಗಳ ಪತ್ತೆ ಹಚ್ಚಲು ಐವರು ಇನ್ಸ್​ಪೆಕ್ಟರ್​ಗಳ ತಂಡ ರಚನೆ ಮಾಡಲಾಗಿದ್ದು, ಹಂತಕರ ಸುಳಿವು ಪತ್ತೆ ಹಚ್ಚಿ ಅರೆಸ್ಟ್​ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆ ನಂತರ ರವಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಿದೆ.

ಇದನ್ನೂ ಓದಿ : ವಿಧಾನಸಭೆ ಕಲಾಪ ಆರಂಭ ಆಗ್ತಿದ್ದಂತೆ ಮುಂದುವರೆದ ಮುಡಾ ಕೋಲಾಹಲ..!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ..!

ದೇಶದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಗುಜರಾತ್​ನ ಭುಜ್​-ಅಹ್ಮದಾಬಾದ್​ ನಡುವೆ ವಂದೇ ಭಾರತ್​ ಮೆಟ್ರೋ ಸಂಚಾರ ಮಾಡಲಿದೆ. 100-250

Live Cricket

Add Your Heading Text Here