Download Our App

Follow us

Home » ಅಪರಾಧ » ಶಾಸಕ ಮುನಿರತ್ನ ಪ್ರಕರಣ SITಗೆ ವಹಿಸಿದ ರಾಜ್ಯ ಸರ್ಕಾರ..!

ಶಾಸಕ ಮುನಿರತ್ನ ಪ್ರಕರಣ SITಗೆ ವಹಿಸಿದ ರಾಜ್ಯ ಸರ್ಕಾರ..!

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿರಿಯ ಐಪಿಎಸ್‌ ಅಧಿಕಾರಿ ಬಿ.ಕೆ ಸಿಂಗ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶ ಹೊರಡಿಸಿದೆ.

ಜಾತಿ ನಿಂದನೆ, ಜೀವ ಬೆದರಿಕೆ ಎರಡು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಶಾಸಕ ಮುನಿರತ್ನರನ್ನು ನಿನ್ನೆ ಮತ್ತೆ ಪೊಲೀಸರು ಅತ್ಯಾಚಾರ ಆರೋಪದಲ್ಲಿ ಬಂಧಿಸಿದ್ದರು.ಶಾಸಕ ಮುನಿರತ್ನ ಜಾತಿ ನಿಂದನೆ ಕೇಸ್​ನಲ್ಲಿ ನಿಟ್ಟುಸಿರು ಬಿಟ್ಟಿದ್ದರು. ಇನ್ನೇನು ಹೊರಗೆ ಬರಬೇಕು ಎನ್ನುವಷ್ಟರಲ್ಲಿ ನಿನ್ನೆ ಅತ್ಯಾಚಾರ ಪ್ರಕರಣದ ಸುರುಳಿ ಸುತ್ತಿಕೊಂಡಿತ್ತು. ಇದೀಗ ಸಂತ್ರಸ್ತ್ರೆ ಕೊಟ್ಟ ದೂರು ಮುನಿರತ್ನರನ್ನ ಜೈಲಿಗಟ್ಟಿದೆ.

ಇನ್ನು ಮುನಿರತ್ನ ಪ್ರಕರಣವನ್ನ SIT ತನಿಖೆ ನಡೆಸಬೇಕು ಎಂದು ಒಕ್ಕಲಿಗ ಕಾಂಗ್ರೆಸ್ ಮುಖಂಡರು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು‌. ಇದೀಗ ಒಕ್ಕಲಿಗ ಕಾಂಗ್ರೆಸ್ ಜನಪ್ರತಿನಿಧಿಗಳ ಮನವಿ ಮೇರೆಗೆ, ವಿಶೇಷ ತನಿಖಾ ತಂಡ (SIT) ತನಿಖೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಯುವತಿಯನ್ನ ಕತ್ತರಿಸಿ, ಮೃತದೇಹ ಫ್ರಿಡ್ಜ್‌ನಲ್ಲಿಟ್ಟ ಹಂತಕ – ಭೀಕರ ಕೃತ್ಯದಿಂದ ಬೆಚ್ಚಿಬಿದ್ದ ಬೆಂಗಳೂರು..!

Leave a Comment

DG Ad

RELATED LATEST NEWS

Top Headlines

ಕರೆಂಟ್​​ ಶಾಕ್​​ನಿಂದ ಮೂರ್ಛೆ ಹೋದ ಕಾಗೆಗೆ ಸಿಪಿಆರ್‌ ನೀಡಿ ಪ್ರಾಣ ಉಳಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ – ಹ್ಯಾಟ್ಸಾಫ್​​ ಎಂದ ನೆಟ್ಟಿಗರು..!

ಸಮಯ ಪ್ರಜ್ಞೆಯಿಂದ ಅದೆಷ್ಟೋ ಜೀವವನ್ನು ಕಾಪಾಡಿದ ಉದಾಹರಣೆಗಳು ನಮಗೆ ಕಾಣಸಿಗುತ್ತದೆ. ಅದೇ ರೀತಿ ಅಗ್ನಿ ಶಾಮಕ ದಳದ ಸಿಬ್ಬಂದಿ ಕೂಡಾ ತಮ್ಮ ಸಮಯ ಪ್ರಜ್ಞೆಯಿಂದ ಕರೆಂಟ್‌ ಶಾಕ್‌

Live Cricket

Add Your Heading Text Here