Download Our App

Follow us

Home » ಸಿನಿಮಾ » ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದ ಟ್ರೈಲರ್ ರಿಲೀಸ್​​ – ಅ.18ಕ್ಕೆ ಸಿನಿಮಾ ತೆರೆಗೆ..!

‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದ ಟ್ರೈಲರ್ ರಿಲೀಸ್​​ – ಅ.18ಕ್ಕೆ ಸಿನಿಮಾ ತೆರೆಗೆ..!

ಸ್ಯಾಂಡಲ್‌ವುಡ್‌ನಲ್ಲಿ ಭಿನ್ನ ಸಿನಿಮಾ ಶೀರ್ಷಿಕೆಯಿಂದ ಗಮನ ಸೆಳೆದ ಸಿನಿಮಾಗಳಲ್ಲಿ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಕೂಡ ಒಂದು. ಈಗಾಗಲೇ ಮೋಷನ್ ಪೋಸ್ಟರ್, ಪೋಸ್ಟರ್, ಟೈಟಲ್ ಟ್ರ್ಯಾಕ್ ಸೇರಿದಂತೆ ಒಂದಷ್ಟು ವಿಚಾರಗಳ ಮೂಲಕ ಸದ್ದು ಮಾಡಿದ ಸಿನಿಮಾ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ.

ನಿರ್ಮಾಪಕ ಚಿಂತನ್ ಕಂಬಣ್ಣ ಅವರ ತಂದೆ ಡಾ. ಶಿವಣ್ಣ .ಕೆ ಟ್ರೈಲರ್​​ರನ್ನು ಬಿಡುಗಡೆಗೊಳಿಸಿದ್ದಾರೆ. ವಿಶೇಷವೆಂದರೆ, ಶಿವಣ್ಣ ಈ ಚಿತ್ರದ ಟೈಟಲ್ ಟ್ರ್ಯಾಕಿಗೆ ಸಾಹಿತ್ಯ ಬರೆದಿದ್ದಾರೆ. ಅದು ಈಗಾಗಲೇ ಬಿಡುಗಡೆಗೊಂದು ಪ್ರೇಕ್ಷಕರನ್ನು ಸೆಳೆದಿದೆ. ಈ ಕಥೆ ತಮ್ಮನ್ನು ಸೆಳೆದ ಬಗ್ಗೆ, ಅದಕ್ಕೆ ಸಾಹಿತ್ಯ ಬರೆದ ಹಿನ್ನೆಲೆಯ ಬಗ್ಗೆ ಒಂದಷ್ಟು ವಿವರಗಳನ್ನು ಶಿವಣ್ಣನವರು ಹಂಚಿಕೊಂಡಿದ್ದಾರೆ. ಇದರೊಂದಿಗೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕ ಚಿಂತನ್ ಕಂಬಣ್ಣ ಅವರು,  ಚಿಂತನ್ ನಟನೆಯತ್ತ ಆಕರ್ಷಿತರಾಗಿ ರಂಗತಂಡಗಳೊಂದಿಗೆ ಸೇರಿಕೊಂಡಾಗ ನಿರ್ದೇಶಕ ಸುಂದರ್ ಎಸ್ ಮತ್ತು ತಂಡದ ಪರಿಚಯವಾಗಿತ್ತಂತೆ. ಆ ಹಂತದಲ್ಲಿ ಸುಂದರ್ ಎಸ್ ಅವರು ರೆಡಿ ಮಾಡಿಟ್ಟುಕೊಂಡಿದ್ದ ಕಥೆಯೊಂದು ಇಷ್ಟವಾಗಿ, ಅದನ್ನು ತಾನೇ ನಿರ್ಮಾಣ ಮಾಡಲು ನಿರ್ಧರಿಸಿದ್ದಾಗಿ ಚಿಂತನ್ ತಿಳಿಸಿದ್ದಾರೆ.

ಇನ್ನು ಈ ಚಿತ್ರದ ಸಾರಥಿ ಸುಂದರ್ ಎಸ್ ಕೂಡಾ ಪ್ರಕರಣ ತನಿಖಾ ಹಂತದಲ್ಲಿದೆ ಚಿತ್ರ ಹುಟ್ಟು ಪಡೆದ ಬಗೆಯನ್ನು ವಿವರಿಸಿದ್ದಾರೆ. ಈ ತಂಡದಲ್ಲಿರುವವರೆಲ್ಲರೂ ರಂಗಭೂಮಿ ಹಿನ್ನೆಲೆಯಿಂದ ಬಂದವರೇ. ನಾಟಕಗಳ ಜೊತೆಗೇ ಸಿನಿಮಾ ಕನಸನ್ನು ಸಾಕಿಕೊಂಡಿದ್ದ ಇವರೆಲ್ಲರೂ ನಾನಾ ಕಥೆಗಳನ್ನು ತಯಾರು ಮಾಡಿಟ್ಟುಕೊಂಡಿದ್ದರು. ಕಡೆಗೂ ಕಥೆಯ ಬಗ್ಗೆ ಗಂಭೀರವಾಗಿ ಚರ್ಚೆ ನಡೆದಾಗ ಈಗಿರುವ ಟ್ರೆಂಡಿಗೆ ಸುಂದರ್ ಎಸ್ ಅವರ ಕಥೆ ಸೂಟ್ ಆಗುತ್ತದೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆ ನಂತರ ನಿರ್ಮಾಪಕರನ್ನು ಹುಡುಕೋ ಕೆಲಸದ ನಡುವೆ ಚಿಂತನ್ ಕಂಬಣ್ಣ ತಾನೇ ನಿರ್ಮಾಣ ಮಾಡೋದಾಗಿ ಮುಂದೆ ಬಂದಿದ್ದರು. ಇದೆಲ್ಲದರಿಂದಾಗಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ ಎಂಬುದು ನಿರ್ದೇಶಕ ಸುಂದರ್ ಮಾತಿನ ಸಾರ.

ಈ ಟ್ರೈಲರ್ ಬಿಡುಗಡೆಯ ವೇಳೆ ನಿರ್ದೇಶಕ ಸುಂದರ್ ಎಸ್, ನಿರ್ಮಾಪಕ ಚಿಂತನ್ ಕಂಬಣ್ಣ, ಡಾ. ಶಿವಣ್ಣ, ಮಹಿನ್ ಕುಬೇರ್, ಮುತ್ತುರಾಜ್, ರಾಜ್ ಗಗನ್, ಎಡಿಟರ್ ನಾನಿಕೃಷ್ಣ, ವಿಎಫ್‌ಎಕ್ಸ್ ಮಾಡಿರುವ ಲಕ್ಷ್ಮೀಪತಿ ಎಂ.ಕೆ ಮೊದಲಾದವರು ಹಾಜರಿದ್ದರು.

ಈ ಸಿನಿಮಾ ಅಕ್ಟೊಬರ್ 18ರಂದು ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಚಿಂತನ್ ಕಂಬಣ್ಣ ಒಂದು ಪಾತ್ರದಲ್ಲಿಯೂ ನಟಿಸಿದ್ದಾರಂತೆ. ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ಗೆ ಪ್ರೇಕ್ಷಕರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ : ಶಾಸಕ ಮುನಿರತ್ನ ಪ್ರಕರಣ SITಗೆ ವಹಿಸಿದ ರಾಜ್ಯ ಸರ್ಕಾರ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here