ಬೆಂಗಳೂರು : ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಏಕ ದರ ನೀತಿ ಜಾರಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಮ್ ಸುರೇಶ್ ಹಾಗೂ ಸಾರಾ ಗೋವಿಂದು ಅವರು ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಾರಾ ಗೋವಿಂದು ಅವರು, ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ದುಬಾರಿ ಟಿಕೆಟ್ ದರ ಇದ್ದು, ತಮಿಳುನಾಡು ಹಾಗೂ ಆಂಧ್ರ ಮಾದರಿ ಏಕ ರೂಪ ದರ ನಿಗದಿಗೆ ಮನವಿ ಮಾಡಿದ್ದೇವೆ.
ಮಲ್ಟಿಪ್ಲೆಕ್ಸ್ ಗಳಲ್ಲಿ 200 ರೂ. ಚಿತ್ರಮಂದಿರಗಳಲ್ಲಿ 150 ರೂ. ದರ ನಿಗದಿಗೆ ಮನವಿ ಮಾಡಿದ್ದೇವೆ. ವಾಣಿಜ್ಯ ಮಂಡಳಿ ಮನವಿಗೆ ಪೂರಕವಾಗಿ ಸ್ಫಂದಿಸಿದ್ದಾರೆ. 10 ದಿನಗಳಲ್ಲಿ ಹೋಮ್ ಡಿಪಾರ್ಟ್ಮೆಂಟ್ ಕಡೆಯಿಂದ ಆದೇಶ ಹೊರಡಿಸೋದಾಗಿ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.
ಇನ್ನು ಈ ಹಿಂದ ಏಕ ರೂಪ ದರ ನಿಗದಿಗೆ ಮನವಿ ಮಾಡಿದ್ವಿ ಅದು ವಾರ್ತಾ ಇಲಾಖೆಯಿಂದ ನೋಟಿಸ್ ಹೋಗಿತ್ತು. ಮಲ್ಟಿಪ್ಲೆಕ್ಸ್ ನವರು ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದಾರೆ. ನಾವು ಈ ಸ್ಟೇ ವೇಕೇಟ್ ಮಾಡಿಸಿ ಕೆಲಸ ಮಾಡ್ತಿದ್ದೀವಿ. ಪರ ಬಾಷೆ ಚಿತ್ರಗಳು ನಮ್ಮಲ್ಲಿ ಹಣವನ್ನು ಲೂಟಿ ಮಾಡ್ತಿದ್ದಾರೆ ಎಂದು ಹೇಳಿಕೆ ನೀಡಿದರು.
ಇದನ್ನೂ ಓದಿ : ಹನುಮಂತು ಮುಗ್ದನಾ.. ಬುದ್ದಿವಂತನಾ? ಮನೆಯವರ ಅಭಿಪ್ರಾಯ ಕೇಳಿ ಸಿಂಗರ್ ಶಾಕ್..!