ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆಗೆ ಅಖಾಡ ರಂಗೇರುತ್ತಿದೆ. ಲೋಕಸಭೆ ಚುನಾವಣೆ 2024ರ ದಿನಾಂಕ, ವೇಳಾಪಟ್ಟಿ ಮತ್ತು ಇತರೆ ವಿವರಗಳನ್ನು ಭಾರತದ ಚುನಾವಣಾ ಆಯೋಗ ಇಂದು ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಲಿದೆ.
ನವದೆಹಲಿಯಲ್ಲಿ ಈ ಸುದ್ದಿಗೋಷ್ಠಿ ನಡೆಯಲಿದ್ದು, ಲೋಕಸಭೆಯ 543 ಸ್ಥಾನಗಳ ಚುನಾವಣೆ ದಿನಾಂಕ, ಫಲಿತಾಂಶ ಪ್ರಕಟವಾಗುವ ದಿನ ಸೇರಿದ ವೇಳಾಪಟ್ಟಿ ಪ್ರಕಟವಾಗಲಿದೆ. ಈ ಪತ್ರಿಕಾಗೋಷ್ಠಿಯನ್ನು ಚುನಾವಣಾ ಆಯೋಗದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುವುದು ಎಂದು ಭಾರತದ ಚುನಾವಣಾ ಆಯೋಗ ಘೋಷಿಸಿದೆ.
ಇಡೀ ದೇಶವೇ ಎದುರು ನೋಡ್ತಿರುವ ಸಾರ್ವತ್ರಿಕ ಚುನಾವಣೆಗೆ ಇಂದು ಮುಹೂರ್ತ ನಿಗದಿ ಆಗುತ್ತಿದ್ದು, ಇಂದಿನಿಂದಲೇ ನೀತಿ ಸಂಹಿತೆ ಕೂಡ ಜಾರಿಯಾಗಲಿದೆ ಎಂದು ಹೇಳಲಾಗಿದೆ. ದಿನಾಂಕ ಘೋಷಣೆ ಬಳಿಕ ಸರ್ಕಾರ ಅಥವಾ ಸಚಿವರು ಅನುದಾನ ಅಥವಾ ಭರವಸೆಗಳನ್ನು ನೀಡುವಂತಿಲ್ಲ. ಶಂಕುಸ್ಥಾಪನೆ, ಉದ್ಘಾಟನೆ, ಚಾಲನೆ ಕಾರ್ಯಕ್ರಮಗಳನ್ನು ನೆರವೇರಿಸುವಂತಿಲ್ಲ. ಮತದಾರರ ಮೇಲೆ ಪ್ರಭಾವ ಬೀರುವಂತಹ ನೇಮಕಾತಿ, ಪ್ರಕಟಣೆ ಹೊರಡಿಸುವಂತಿಲ್ಲ ಎಂಬ ಆದೇಶ ಹೊರಬಿಳಲಿದೆ.
ಇದನ್ನೂ ಓದಿ : ಬೆಂಗಳೂರಿನ ಅರಮನೆ ಮೈದಾನ ಜಾಗ ವ್ಯಾಜ್ಯ ರೀ ಓಪನ್..!