Download Our App

Follow us

Home » ಸಿನಿಮಾ » ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಮುಹೂರ್ತ ಫಿಕ್ಸ್‌ – ಈ ಬಾರಿಯೂ ಕಿಚ್ಚನದ್ದೇ ನಿರೂಪಣೆ..!

ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಮುಹೂರ್ತ ಫಿಕ್ಸ್‌ – ಈ ಬಾರಿಯೂ ಕಿಚ್ಚನದ್ದೇ ನಿರೂಪಣೆ..!

ಕಿರುತೆರೆ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಸೆಪ್ಟೆಂಬರ್‌ 28ರಿಂದ ಕಿಚ್ಚ ಸುದೀಪ್ ನಿರೂಪಣೆಯಲ್ಲೇ ದೊಡ್ಮನೆ ಆಟ ಆರಂಭವಾಗಲಿದೆ. ಈ ಮೂಲಕ ಕಿಚ್ಚ ಸುದೀಪ್‌ ಈ ಬಾರಿ ಹೋಸ್ಟ್‌ ಮಾಡೋದಿಲ್ಲ ಎಂಬ ವದಂತಿಗೆ ತೆರೆಬಿದ್ದಿದೆ. ಈಗಾಗಲೇ ಸದ್ದಿಲ್ಲದೆ ಹೈದರಾಬಾದ್​​ನಲ್ಲಿ ಫ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ.

ಈ ಬಾರಿ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ ಸ್ಟಾರ್‌ಗಳ ಜೊತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಇರಲಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಯಾವೆಲ್ಲ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬ ಕುತೂಹಲವೂ ಪ್ರೇಕ್ಷಕರಲ್ಲಿದೆ. ಈಗಾಗಲೇ ಹಲವು ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆ. ಕಿರುತೆರೆ ನಟ ತ್ರಿವಿಕ್ರಮ್ 11ನೇ ಬಿಗ್‌ಬಾಸ್‌ ಕನ್ನಡದಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ.

ಕಲರ್ಸ್ ಕನ್ನಡದಲ್ಲಿ ಈಗಾಗಲೇ ಅಂತರಪಟ ಸೀರಿಯಲ್ ಬರ್ತಿದೆ. ಇದು ಕಳೆದ ವರ್ಷದಿಂದಲೂ ಪ್ರಸಾರ ಆಗುತ್ತಿದೆ. ಒಂದು ಹಂತಕ್ಕೆ ಚೆನ್ನಾಗಿಯೇ ಹೋಗುತ್ತಿದೆ. ಆದರೆ, ಈ ಸೀರಿಯಲ್ ಕೂಡ ಎಂಡ್ ಆಗುತ್ತಿದೆ. ಈ ಮೂಲಕ ಈ ಸೀರಿಯಲ್‌ ಬಿಗ್ ಬಾಸ್ ಸೀಸನ್‌-11 ಕ್ಕೆ ದಾರಿ ಮಾಡಿಕೊಡುತ್ತಿದೆ. ಕೆಂಡಸಂಪಿಗೆ ಸೀರಿಯಲ್ ಕೂಡ ಕೊನೆ ಹಂತಕ್ಕೆ ಬಂದಿದೆ. ಕಳೆದ ಎರಡು ವರ್ಷದಿಂದಲೇ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಆದರೆ, ಕಲರ್ಸ್ ಕನ್ನಡ ಚಾನೆಲ್ ಈಗ ಈ ಸೀರಿಯಲ್‌ ಅನ್ನು ಎಂಡ್ ಮಾಡುತ್ತಿದೆ. ಹಾಗಾಗಿ ಈ ಸೀರಿಯಲ್ ಕೂಡ ಬಿಗ್ ಬಾಸ್‌ಗೆ ದಾರಿ ಮಾಡಿಕೊಡುತ್ತಿದೆ ಅಂತಲೂ ಹೇಳಬಹುದು.

ಇದನ್ನೂ ಓದಿ : ‘ಕಾಂತ’ ಸಿನಿಮಾಗಾಗಿ ಕೈ ಜೋಡಿಸಿದ ರಾಣಾ ದಗ್ಗುಬಾಟಿ-ದುಲ್ಕರ್ ಸಲ್ಮಾನ್..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here