Download Our App

Follow us

Home » ಅಪರಾಧ » ​ಒಂದು ವಾರದ ನಂತರ ವಿಚಾರಣೆಯಲ್ಲಿ ಸ್ಫೋಟಕ ರಹಸ್ಯ ಬಾಯ್ಬಿಟ್ಟ ‘ಡಿ’ ಗ್ಯಾಂಗ್ : ಏನದು?

​ಒಂದು ವಾರದ ನಂತರ ವಿಚಾರಣೆಯಲ್ಲಿ ಸ್ಫೋಟಕ ರಹಸ್ಯ ಬಾಯ್ಬಿಟ್ಟ ‘ಡಿ’ ಗ್ಯಾಂಗ್ : ಏನದು?

ಬೆಂಗಳೂರು : ರೇಣುಕಾಸ್ವಾಮಿ ಎಂಬ ಅಮಾಯಕ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಕೇಸ್​ನಲ್ಲಿ ನಟ ದರ್ಶನ್​ ಅಂಡ್ ​ಗ್ಯಾಂಗ್ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ದಿನ ಕಳೆದಂತೆ ರೇಣುಕಾಸ್ವಾಮಿ ಕೊಲೆ ಕೇಸ್​ ಬಗ್ಗೆ ಪೊಲೀಸ್​ ಅಧಿಕಾರಿಗಳು ಒಂದೊಂದೆ ಸಾಕ್ಷಿಯನ್ನು ಕಲೆ ಹಾಕುತ್ತಿದ್ದಾರೆ. ಇದೀಗ 8 ದಿನಗಳ ವಿಚಾರಣೆ ನಂತರ  ಆರೋಪಿಗಳು ಸ್ಫೋಟಕ ರಹಸ್ಯ ಬಾಯ್ಬಿಟ್ಟಿದ್ದಾರೆ.

ಹೌದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕುಗೊಂಡಿದ್ದು, ಆರೋಪಿಗಳ ವಿಚಾರಣೆ ವೇಳೆ ಶೆಡ್​ನಲ್ಲೇ ರೇಣುಕಸ್ವಾಮಿ ಬಟ್ಟೆ ಬಚ್ಚಿಟ್ಟಿರುವುದನ್ನು ಹಂತಕರು ಬಾಯ್ಬಿಟ್ಟಿದ್ದಾರೆ. ನಾಗರಾಜ್​, ದೀಪಕ್​​, ನಂದೀಶ್​ನನ್ನು ಶೆಡ್​ಗೆ ಕರೆದೊಯ್ದಿದ್ದ ಪೊಲೀಸರು ಆರೋಪಿಗಳು ಕೊಟ್ಟ ಮಾಹಿತಿ ಮೇಲೆ ರಕ್ತ ಸಿಕ್ತ ಬಟ್ಟೆಗಳು ಪತ್ತೆ ಹಚ್ಚಿದ್ದಾರೆ.

ಬಡಿದುಕೊಂದ ನಂತರ ಆರೋಪಿಗಳು ರಕ್ತಸಿಕ್ತ ಬಟ್ಟೆಯನ್ನು ಶೆಡ್​ನಲ್ಲಿ ಮುಚ್ಚಿಟ್ಟಿದ್ದರು. ನಂತರ ರೇಣುಕಾಸ್ವಾಮಿ ಮೃತದೇಹಕ್ಕೆ ಬೇರೆ ಬಟ್ಟೆ ತೊಡಿಸಿ ಕಾರಿನಲ್ಲಿ ಶೆಡ್​ನಿಂದ ಸಾಗಿಸಿದ್ದರು. ಆರೋಪಿ ಪವನ್ ಮೃತದೇಹಕ್ಕೆ ​​​ ಬಟ್ಟೆಗಳನ್ನು ಹಾಕಿದ್ದ ಎಂದು ತಿಳಿಸಿದ್ದಾರೆ. ಇನ್ನು ಮೃತದೇಹ ಗುರುತಿಸಿದ್ದ ರೇಣುಕ ಫ್ಯಾಮಿಲಿ ಬಟ್ಟೆ ಬೇರೆ ಎಂದಿತ್ತು. ಹೀಗಾಗಿ ಬಟ್ಟೆ ಬಗ್ಗೆ ವಿಚಾರಣೆ ಮಾಡಿದ್ದ ಪೊಲೀಸರಿಗೆ ರಕ್ತಸಿಕ್ತ ಬಟ್ಟೆ ಮುಚ್ಚಿಟ್ಟಿರುವುದು ತಿಳಿದು ಬಂದಿದೆ. ಈ ಬಟ್ಟೆಗಳನ್ನು ಈಗಾಗಲೇ ಪೊಲೀಸರು FSLಗೆ ಕಳಿಸಿರುವ ಮಾಹಿತಿ ಲಭ್ಯವಾಗಿದೆ.

ಇನ್ನು ಇಡೀ ಕೊಲೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿರುವುದು ರೇಣುಕಾಸ್ವಾಮಿ ಮೊಬೈಲ್​​​. ಆದರೆ ಜೂನ್​ 8ರ ಸಂಜೆಯಿಂದ ರೇಣುಕಸ್ವಾಮಿ ಮೊಬೈಲ್​ ಸ್ವಿಚ್​ಆಫ್​ ಬರ್ತಿದ್ದು, ಪೊಲೀಸರು ಮೊಬೈಲ್​ಗಾಗಿ ಶೋಧ ಮಾಡುತ್ತಿದ್ದಾರೆ. ರಾಜಾಕಾಲುವೆ ಸೇರಿ ಹಲವೆಡೆ ರೇಣುಕಸ್ವಾಮಿ ಮೊಬೈಲ್​ಗೆ ಹುಡುಕಾಟ ನಡೆಸುತ್ತಿರುವ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ನೆರವು ಪಡೆದು ರಾಜಕಾಲುವೆಯಲ್ಲಿ ಶೋಧ ಕಾರ್ಯಮಾಡುತ್ತಿದ್ದಾರೆ.

ಇದನ್ನೂ ಓದಿ : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್​ – ಬಂಧಿತ ಆರೋಪಿ ನಾಗೇಶ್ವರ್ ರಾವ್​ ಮನೆಯಲ್ಲಿ 1.49 ಕೋಟಿ ಹಣ ಜಪ್ತಿ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here