ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 14 ನಿವೇಶನಗಳ ಕಂಟಕ ಯಾವಾಗ ಯಾರ ಬುಡಕ್ಕೆ ಬರುತ್ತದೆಯೋ ಗೊತ್ತಿಲ್ಲ. ಒಂದೆಡೆ ಲೋಕಾಯುಕ್ತ ಪೊಲೀಸರು, ಮತ್ತೊಂದೆಡೆ ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯ ಕೂಡಾ ಹಗರಣವನ್ನು ಬಗೆಯುತ್ತಿದೆ. ಇದರ ನಡುವೆ ಮುಡಾ ಕೇಸ್ನಲ್ಲಿ ಮತ್ತೊಂದು ಬಿಗ್ ಡೆವಲಪ್ಮೆಂಟ್ ನಡೆದಿದೆ.
ಮುಡಾ ಕೇಸ್ಗೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಆಪ್ತ ಮರಿಗೌಡಗೆ ED ಬುಲಾವ್ ನೀಡಿದೆ. Ed ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಹಿನ್ನಲೆ ಮೈಸೂರು ಮುಡಾದ ಮಾಜಿ ಅಧ್ಯಕ್ಷ ಕೆ.ಮರಿಗೌಡ ಬೆಂಗಳೂರಿನ ED ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿದ್ದಾರೆ.
ಮೈಸೂರು ಮುಡಾದ ಮಾಜಿ ಅಧ್ಯಕ್ಷ ಕೆ.ಮರಿಗೌಡ ಸಿಎಂ ಸೈಟ್ ವಿವಾದ ವೇಳೆ ರಾಜೀನಾಮೆ ನೀಡಿದ್ದರು. ಸಿಎಂ ಸಿದ್ದು ಸೂಚನೆಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಮರಿಗೌಡರನ್ನು ಕರೆಸಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಎರಡು ದಿನಗಳ ಹಿಂದೆ, ನಕಲಿ ಸಹಿ ಆರೋಪದಲ್ಲಿ ED ಅಧಿಕಾರಿಗಳು ಸಿಎಂ ಖಾಸಗಿ ಆಪ್ತ ಸಹಾಯಕ ಟಿ.ಸಿ.ಕುಮಾರ್ ಮಾಡಿದ್ದರು. ಇನ್ನು ನಿನ್ನೆಯಷ್ಟೇ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್ನಾಯ್ಕ್ರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ತೀವ್ರ ವಿಚಾರಣೆ ನಡೆಸಿದೆ.
ಇದನ್ನೂ ಓದಿ : 3 ತಿಂಗಳಿಂದ ಆಂಬ್ಯುಲೆನ್ಸ್ ನೌಕರರ ವೇತನ ವಿಳಂಬ.. ಮತ್ತೆ ಹೋರಾಟಕ್ಕೆ ಮುಂದಾದ 108 ಸಿಬ್ಬಂದಿಗಳು..!