ಮೈಸೂರು : ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಹೀಗಾಗಿ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಸಿದ್ದು ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಕರೆ ನೀಡಿದ್ದಾರೆ.
ಅದರಂತೆ ರಾಜ್ಯಪಾಲರ ಕ್ರಮದ ವಿರುದ್ದ ನಾಳೆ ತಿ. ನರಸೀಪುರ ಬಂದ್ಗೆ ಸಂಸದ ಸುನಿಲ್ ಬೋಸ್ ಕರೆ ನೀಡಿದ್ದಾರೆ. ಸಂಸದ ಸುನಿಲ್ ಬೋಸ್ ಸೂಚನೆಯಂತೆ ತಾಲೂಕು ಕಾಂಗ್ರೆಸ್ನಿಂದ ಪಟ್ಟಣ ಬಂದ್ ಆಚರಣೆಗೆ ನಿರ್ಧರಿಸಿದ್ದಾರೆ.
ಹಾಗಾಗಿ ರಾಜ್ಯಾದ್ಯಂತ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿದ್ದತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅಭಿಮಾನಿಗಳ ಸಂಘ, ರಾಜ್ಯ ಕುರುಬರ ಸಂಘ, ವಿವಿಧ ಸಂಘಟನೆಗಳು ನಾಳೆ ಪ್ರತಿಭಟನೆಗೆ ಕರೆ ನೀಡಿದ್ದು, OBC ಸಂಘಟನೆ ಮೈಸೂರು ಬಂದ್ಗೂ ಕರೆ ನೀಡಿದೆ. ಬೆಂಗಳೂರು ಹಾಗೂ ಎಲ್ಲಾ ಜಿಲ್ಲೆಗಳಲ್ಲೂ ಸಂಪೂರ್ಣ ಅಲರ್ಟ್ ಆಗಿದ್ದು, ಯಾವ ಟೈಮಲ್ಲಾದ್ರೂ ಕಾನೂನು ಸುವ್ಯವಸ್ಥೆಗೆ ತೊಂದರೆ ಸಾಧ್ಯತೆಯಿದೆ.
ಇದನ್ನೂ ಓದಿ : ಸಿಎಂ ಸಿದ್ದು ಬೆಂಬಲಿಸಿ ನಾಳೆ ರಾಜ್ಯಾದ್ಯಂತ ಬೃಹತ್ ಹೋರಾಟ – ಪೊಲೀಸರು ಹೈ ಅಲರ್ಟ್..!