Download Our App

Follow us

Home » ಜಿಲ್ಲೆ » ರಾಜ್ಯಪಾಲರ ಕ್ರಮದ ವಿರುದ್ದ ನಾಳೆ ತಿ. ನರಸೀಪುರ ಬಂದ್​ಗೆ ಸಂಸದ ಸುನಿಲ್ ಬೋಸ್ ಕರೆ..!

ರಾಜ್ಯಪಾಲರ ಕ್ರಮದ ವಿರುದ್ದ ನಾಳೆ ತಿ. ನರಸೀಪುರ ಬಂದ್​ಗೆ ಸಂಸದ ಸುನಿಲ್ ಬೋಸ್ ಕರೆ..!

ಮೈಸೂರು : ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಹೀಗಾಗಿ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಸಿದ್ದು ಬೆಂಬಲಿಗರು, ಕಾಂಗ್ರೆಸ್​ ಕಾರ್ಯಕರ್ತರು ಕರೆ ನೀಡಿದ್ದಾರೆ.

ಅದರಂತೆ ರಾಜ್ಯಪಾಲರ ಕ್ರಮದ ವಿರುದ್ದ ನಾಳೆ ತಿ. ನರಸೀಪುರ ಬಂದ್​​ಗೆ ಸಂಸದ ಸುನಿಲ್ ಬೋಸ್ ಕರೆ ನೀಡಿದ್ದಾರೆ. ಸಂಸದ ಸುನಿಲ್ ಬೋಸ್ ಸೂಚನೆಯಂತೆ ತಾಲೂಕು ಕಾಂಗ್ರೆಸ್​​ನಿಂದ ಪಟ್ಟಣ ಬಂದ್ ಆಚರಣೆಗೆ ನಿರ್ಧರಿಸಿದ್ದಾರೆ.

ಹಾಗಾಗಿ ರಾಜ್ಯಾದ್ಯಂತ ಪೊಲೀಸರು ಫುಲ್​ ಅಲರ್ಟ್ ಆಗಿದ್ದು, ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿದ್ದತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅಭಿಮಾನಿಗಳ ಸಂಘ, ರಾಜ್ಯ ಕುರುಬರ ಸಂಘ, ವಿವಿಧ ಸಂಘಟನೆಗಳು ನಾಳೆ ಪ್ರತಿಭಟನೆಗೆ ಕರೆ ನೀಡಿದ್ದು, OBC ಸಂಘಟನೆ ಮೈಸೂರು ಬಂದ್​ಗೂ ಕರೆ ನೀಡಿದೆ. ಬೆಂಗಳೂರು ಹಾಗೂ ಎಲ್ಲಾ ಜಿಲ್ಲೆಗಳಲ್ಲೂ ಸಂಪೂರ್ಣ ಅಲರ್ಟ್​ ಆಗಿದ್ದು, ಯಾವ ಟೈಮಲ್ಲಾದ್ರೂ ಕಾನೂನು ಸುವ್ಯವಸ್ಥೆಗೆ ತೊಂದರೆ ಸಾಧ್ಯತೆಯಿದೆ.

ಇದನ್ನೂ ಓದಿ : ಸಿಎಂ ಸಿದ್ದು ಬೆಂಬಲಿಸಿ ನಾಳೆ ರಾಜ್ಯಾದ್ಯಂತ ಬೃಹತ್​ ಹೋರಾಟ – ಪೊಲೀಸರು ಹೈ ಅಲರ್ಟ್..!

Leave a Comment

DG Ad

RELATED LATEST NEWS

Top Headlines

ಮಾಜಿ ಮಂತ್ರಿ ಮುನಿರತ್ನ ವಿರುದ್ಧ ತಿರುಗಿಬಿದ್ದ ಒಕ್ಕಲಿಗರು – ಕಠಿಣ ಕ್ರಮಕ್ಕೆ ಆಗ್ರಹ..!

ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಕೇಸ್‌ನಲ್ಲಿ ಶಾಸಕ ಮುನಿರತ್ನ ಬಂಧನವಾಗಿದೆ. ಇದೀಗ ಒಕ್ಕಲಿಗ ಸಮುದಾಯ ಮತ್ತು ಒಕ್ಕಲಿಗ ಹೆಣ್ಣು ಮಕ್ಕಳಿಗೆ ಅಪಮಾನ  ಮಾಡಿರುವುದನ್ನು

Live Cricket

Add Your Heading Text Here