Download Our App

Follow us

Home » ಸಿನಿಮಾ » ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ರಾಜ್ಯಾದ್ಯಂತ ಹೌಸ್​​ಫುಲ್ ಪ್ರದರ್ಶನ, ಪೃಥ್ವಿ-ಮಿಲನಾ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ..!

‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ರಾಜ್ಯಾದ್ಯಂತ ಹೌಸ್​​ಫುಲ್ ಪ್ರದರ್ಶನ, ಪೃಥ್ವಿ-ಮಿಲನಾ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ..!

ಕನ್ನಡ ಚಿತ್ರರಂಗದಲ್ಲಿ ಟೈಟಲ್ ಮೂಲಕ ಗಮನ ಸೆಳೆದ ಸಿನಿಮಾ ‘ಫಾರ್ ರಿಜಿಸ್ಟೇಷನ್’. ಇದೇ ಫೆಬ್ರವರಿ 23ಕ್ಕೆ ಸಖತ್ ಗ್ರ್ಯಾಂಡ್ ಆಗಿ ತೆರೆ ಮೇಲೆ ಎಂಟ್ರಿ ಕೊಟ್ಟು ಅಷ್ಟೇ ಕ್ಲಾಸಿಯಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ರಾಜ್ಯಾದ್ಯಂತ 200ಕ್ಕೂ ಹೆಚ್ಚು ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಫಾರ್ ರಿಜಿಸ್ಟೇಷನ್ ಅಬ್ಬರ ಆರ್ಭಟ ಜೋರಾಗಿದೆ. ಎಲ್ಲಾ ಕಡೆಗಳಲ್ಲಿಯೂ ಹೌಸ್​​ಫುಲ್ ಪ್ರದರ್ಶನ ಕಾಣ್ತಿದೆ.

ಈ ಹಿಂದೆ ‘ಲವ್ ಮಾಕ್ಟೇಲ್’, ಲವ್ ಮಾಕ್ಟೇಲ್ 2, ದಿಯಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಸಖತ್ ಕಲರ್ಫುಲ್ ಆಗಿ ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ಮೋಡಿ ಮಾಡಿದ್ರು. ಈಗ ಇವರಿಬ್ಬರ ಕಾಂಬಿನೇಷನ್ನಲ್ಲಿ ಫಾರ್ ರಿಜಿಸ್ಟೇಷನ್ ಸಿನಿಮಾ ಸಖತ್ ಕಲರ್ಫುಲ್ ಆಗಿ ತೆರೆ ಮೇಲೆ ಗಮನ ಸೆಳೆಯುತ್ತಿದೆ.

ಮಿಲನಾ ನಾಗರಾಜ್ ಮತ್ತು ಪೃಥ್ವಿ ಅಂಬಾರ್ ಅವರನ್ನು ಫ್ಯಾಮಿಲಿ ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಾರೆ. ಕ್ಲಾಸ್ ಆದಂತಹ ಕಥೆಗಳಿಗೆ ತುಂಬ ಚೆನ್ನಾಗಿ ಹೊಂದಿಕೆ ಆಗುವಂತಹ ಕಲಾವಿದರಿವರು. ಅವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಕೂಡ ಫ್ಯಾಮಿಲಿ ಆಡಿಯನ್ಸ್ಗೆ ಹೇಳಿ ಮಾಡಿಸಿದಂತಿದೆ. ಒಂದು ಫ್ಯಾಮಿಲಿಯ ಕಹಾನಿ ಇದರಲ್ಲಿ ಇದೆ. ಗಂಡ-ಹೆಂಡತಿ ನಡುವಿನ ಸಂಬಂಧಗಳ ಕಥೆಯನ್ನು ಈ ಸಿನಿಮಾ ವಿವರಿಸುತ್ತದೆ. ಮನರಂಜನೆ ನೀಡುತ್ತಲೇ ಒಂದು ಮೆಸೇಜ್ ನೀಡುವಲ್ಲಿಯೂ ಈ ಸಿನಿಮಾ ಸಕ್ಸಸ್ ಆಗಿ ಪ್ರೇಕ್ಷಕರನ್ನ ರಂಜಿಸುತ್ತಿದೆ.

  

ಮಿಲನಾ ನಾಗರಾಜ್ ಮತ್ತು ಪೃಥ್ವಿ ಅಂಬಾರ್ ಮಾತ್ರವಲ್ಲದೇ ಈ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದರ ದೊಡ್ಡ ಬಳಗವಿದೆ. ಪಿ. ರವಿಶಂಕರ್, ತಬಲ ನಾಣಿ, ಸುಧಾ ಬೆಳವಾಡಿ, ಸಿಹಿ ಕಹಿ ಚಂದ್ರು, ರಮೇಶ್ ಭಟ್, ಎಂ.ಎಸ್. ಉಮೇಶ್, ಬಾಬು ಹಿರಣ್ಣಯ್ಯ ಸೇರಿದಂತೆ ಸಾಕಷ್ಟು ಹಿರಿಯ ಕಿರಿಯ ಕಲಾವಿದರು ನಟಿಸಿದ್ದಾರೆ. ಕಾಮಿಡಿ ಮೂಲಕ ತಬಲ ನಾಣಿ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ.

ಪಿ. ರವಿಶಂಕರ್ ಹೆಚ್ಚು ಹೈಲೈಟ್ ಆಗಿದ್ದಾರೆ. ಬೇರೆಲ್ಲ ಸಿನಿಮಾಗಳಲ್ಲಿ ವಿಲನ್ ಆಗಿ ಅಥವಾ ಖಡಕ್ ತಂದೆ/ಅಣ್ಣನಾಗಿ ಅಬ್ಬರಿಸುವ ಅವರು ಈ ಸಿನಿಮಾದಲ್ಲಿ ಲವಲವಿಕೆ ಇರುವಂತಹ ಲಾಯರ್ ಪಾತ್ರ ಮಾಡಿದ್ದಾರೆ. ಕಥೆಯ ನಡುನಡುವೆ ಅನೇಕ ದೃಶ್ಯಗಳಲ್ಲಿ ಸಿನಿರಸಿಕರಿಗೆ ಕಿಕ್ ಕೊಡ್ತಿದೆ. ಒಟ್ಟಾರೆಯಾಗಿ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಒಂದೊಳ್ಳೆ ಮೆಸೇಜ್ ಮೂಲಕ ಫ್ಯಾಮಿಲಿ ಅಡಿಯನ್ಸ್ ಸೇರಿದಂತೆ ಮಾಸ್-ಕ್ಲಾಸ್ ಸಿನಿರಸಿಕರನ್ನ ಥಿಯೇಟರ್ಗೆ ಕೈ ಬೀಸಿ ಕರೆಯುತ್ತಿದೆ. ಎಲ್ಲ ವರ್ಗದ ಪ್ರೇಕ್ಷಕರು ಫಾರ್ ರಿಜಿಸ್ಟ್ರೇಷನ್ ಸಿನಿಮಾ ಕಣ್ತುಂಬಿಕೊಂಡು ಎಂಜಾಯ್ ಮಾಡ್ತಿದ್ದಾರೆ.

ಇದನ್ನೂ ಓದಿ : ಗಗನಯಾನ ಮಿಷನ್ ​​- ಭಾರತದಿಂದ ಬಾಹ್ಯಾಕಾಶಕ್ಕೆ ಹಾರಲಿರುವ 4 ಗಗನಯಾತ್ರಿಗಳ ಹೆಸರು ಘೋಷಿಸಿದ ಪ್ರಧಾನಿ ಮೋದಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here