ಮೈಸೂರು : MUDAದಲ್ಲಿ 2500 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ನನ್ನ ಬಳಿ ಎಲ್ಲಾ ದಾಖಲೆ ಇದೆ, ಬಹಿರಂಗ ಪಡಿಸ್ತೇನೆ. ಇಡೀ ಹಗರಣ ಮುಚ್ಚಿ ಹಾಕೋ ಯತ್ನ ನಡೀತಿದೆ ಎಂದು
MUDA ಬಗ್ಗೆ ಮೈಸೂರು ಶಾಸಕ ಶ್ರೀವತ್ಸ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಮಾತನಾಡಿ, ನಿನ್ನೆ ಸಚಿವರು ಬಂದರೂ ನನಗೆ ಮಾಹಿತಿಯನ್ನೇ ಕೊಟ್ಟಿಲ್ಲ. ಸಭೆಗೆ ನನ್ನನ್ನು ಕರೆದಿದ್ದರೆ ಎಲ್ಲಾ ದಾಖಲಾತಿ ನೀಡ್ತಿದ್ದೆ, ಹಗರಣದಲ್ಲಿ ಅಧಿಕಾರಿಯೊಬ್ಬರನ್ನು ರಕ್ಷಿಸೋ ಕೆಲಸ ಆಗ್ತಿದೆ. ಹಗರಣ ಬಿಜೆಪಿ ಕಾಲದಲ್ಲಿ ನಡೆದಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, MUDA ದಾಖಲೆಗಳನ್ನು ಬೆಂಗಳೂರಿಗೆ ಕೊಂಡು ಹೋಗಿದ್ದೇಕೆ? ಎಲ್ಲಾ ಕಣ್ಣ ಮುಂದೆ ಇರುವಾಗ ತನಿಖೆಗೆ 1 ತಿಂಗಳು ಬೇಕಾ ? ಎಂದು ಪ್ರಶ್ನಿಸಿದ್ದಾರೆ.
ಶಾಸಕ ಶ್ರೀವತ್ಸ ಅವರು MUDA ಹಗರಣದ ತನಿಖೆಗೆ SITಗೆ ಆಗ್ರಹಿಸಿದ್ದು, ವಿಧಾನಸಭೆ ಹಾಗೂ ಹೊರಗೆ ಹೋರಾಟ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : ನನ್ನ ಪತ್ನಿಗೆ ಕಾನೂನು ಪ್ರಕಾರವೇ MUDA ಸೈಟ್ ಬಂದಿದೆ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ..!