ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುರೇಶ್ ಕುಮಾರ್ ಹಾಗೂ ಪುಟ್ಟಣ್ಣ ನಡುವೆ ಜಿದ್ದಿನ ಯುದ್ಧವೇ ನಡೆದಿತ್ತು. ವಿಧಾನಸೌಧ ಪ್ರವೇಶಕ್ಕಾಗಿ ಇಬ್ಬರು ಗೆಲುವಿನ ಕಾಳಗಕ್ಕಿಳಿದಿದ್ರು. ಆ ಚುನಾವಣೆಯಲ್ಲಿ ಗೆದ್ದ ಸುರೇಶ್ ಕುಮಾರ್ MLA ಆಗಿದ್ದಾರೆ. ಸೋತಿದ್ದ ಪುಟ್ಟಣ್ಣ, ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದು MLC ಆಗಿದ್ದಾರೆ. ಇದೀಗ ಮತ್ತೆ ಶಾಸಕ ಸುರೇಶ್ ಕುಮಾರ್ ಹಾಗೂ ವಿಧಾನರಪರಿಷನ್ ಸದಸ್ಯ ಪುಟ್ಟಣ್ಣ ಮತ್ತೆ ಯುದ್ಧಕ್ಕಿಳಿದಿದ್ದಾರೆ. ಒಂದೇ ಕಟ್ಟಡದ ಕಚೇರಿಗಾಗಿ ಕಿತ್ತಾಟಕ್ಕಿಳಿದಿದ್ದಾರೆ.
ರಾಜಾಜಿನಗರದಲ್ಲಿ 4 ಅಂತಸ್ತುಗಳ ಕಟ್ಟಡ ನಿರ್ಮಾಣವಾಗಿದೆ. BBMP ವಾರ್ಡ್ ಕಚೇರಿ ಸಂಕೀರ್ಣದ 3ನೇ ಮಹಡಿಯಲ್ಲಿ MLA ಕಚೇರಿಯಿದ್ದು, ಹಳೇ ಕಚೇರಿ ತೆರವು ಮಾಡಿ ಇಲ್ಲಿ ಸುರೇಶ್ಕುಮಾರ್ ಕಚೇರಿ ತೆರೆಯುತ್ತಿದ್ದಾರೆ.
ಇದೀಗ ಅದೇ ಕಟ್ಟಡದಲ್ಲಿ ನನಗೆ ಕಚೇರಿ ಕೊಡಬೇಕೆಂದು MLC ಪುಟ್ಟಣ್ಣ ಪಟ್ಟು ಹಿಡಿದಿದ್ದಾರೆ. ಪುಟ್ಟಣ್ಣ ಹಠಕ್ಕೆ ಶಾಸಕ ಸುರೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದು, MLCಗೆ ಆಫೀಸ್ ಕೊಡಲು ಅವಕಾಶ ಇದೆಯಾ ಎಂದು ಪ್ರಶ್ನೆ ಎತ್ತಿದ್ದಾರೆ.
ಇನ್ನು ಶಾಸಕರಿಬ್ಬರ ಜಟಾಪಟಿಯಿಂದ ಪೀಕಲಾಟಕ್ಕೆ ಸಿಲುಕಿರುವ BBMP, ಕಾನೂನಿನಲ್ಲಿ ಅವಕಾಶ ಇದೆಯಾ ಎಂದು ಪರಿಶೀಲನೆ ಮಾಡುತ್ತಿದೆ. ಏನ್ ಮಾಡ್ಬೇಕೆಂದು ತೋಚದೆ ಇಕ್ಕಟ್ಟಿಗೆ ಸಿಲುಕಿರುವ BBMP ಚೀಫ್ ಕಮಿಷನರ್ ನೇತೃತ್ವದಲ್ಲಿ ಮ್ಯಾರಥಾನ್ ಮೀಟಿಂಗ್ ನಡೆಸಲು ನಿರ್ಧರಿಸಿದ್ದು, ಮೀಟಿಂಗ್ ಬಳಿಕ ಈ ಬಗ್ಗೆ ಅಂತಿಮ ನಿಲುವು ಏನೆಂದು ತಿಳಿಸಲಿದೆ.
ಇದನ್ನೂ ಓದಿ : ನಮ್ಮ ಸರ್ಕಾರ ಇದ್ದಾಗ ವಿಪಕ್ಷದಲ್ಲಿದ್ದು ಏನ್ ಮಾಡಿದ್ರಿ – ಸಿಎಂ ಸಿದ್ದು ಹಗರಣಗಳ ಅಸ್ತ್ರಕ್ಕೆ ಆರ್.ಅಶೋಕ್ ತಿರುಗೇಟು..!