ಬೆಂಗಳೂರು : ಮುಡಾ, ವಾಲ್ಮೀಕಿ ಹಗರಣ ಅಸ್ತ್ರ ಹಿಡಿದು ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ನಿನ್ನೆ ಸದನದಲ್ಲೇ ಹಗರಣಗಳ ಪಟ್ಟಿ ಹಿಡಿದು ತಿರುಗೇಟು ನೀಡಿದ್ದರು. ಬಿಜೆಪಿ ಅಧಿಕಾರಾವಧಿಯ 21 ಹಗರಣಗಳ ತನಿಖೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ಸಿದ್ದು ಅಸ್ತ್ರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತ್ಯಸ್ತ್ರ ಬಿಟ್ಟಿದ್ದಾರೆ.
ಈ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್. ಅಶೋಕ್ ಅವರು, ನಮ್ಮ ಸರ್ಕಾರ ಇದ್ದಾಗ ವಿಪಕ್ಷದಲ್ಲಿದ್ದು ಏನ್ ಮಾಡಿದ್ರಿ? ಆಗಲೇ ಏಕೆ ತನಿಖೆ ಮಾಡಿ ಅಂತಾ ಆಗ್ರಹ ಮಾಡಲಿಲ್ಲ. ಈಗ ವಾಲ್ಮೀಕಿ ಹಗರಣ ಮುಚ್ಚಿಹಾಕಲು ಯತ್ನಿಸುತ್ತಿದ್ದೀರಾ. ಸಿದ್ದರಾಮಯ್ಯನವರೇ ನಿಮ್ಮ ಬುಡಕ್ಕೆ ಬಂದಿದೆ ಅಂತಾ ಇದೆಲ್ಲಾ ಮಾಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಇನ್ನು SITಗೆ ಕೊಟ್ಟು ವಾಲ್ಮೀಕಿ ಹಗರಣ ಮುಚ್ಚಿಹಾಕೋ ಪ್ರಯತ್ನನಾ..? ED ಬರೋವರೆಗೂ ಮಂತ್ರಿ, MLAಯನ್ನು SIT ಯಾಕೆ ಅರೆಸ್ಟ್ ಮಾಡಿರಲಿಲ್ಲ ಎಲೆಕ್ಷನ್ಗೆ ವಾಲ್ಮೀಕಿ ನಿಗಮ ಹಣ ಬಳಸಿಲ್ಲ ಅಂದ್ರೆ ಕೇಸ್ ಹಾಕಲಿ. ತಾಕತ್ತಿದ್ದರೆ ED ವಿರುದ್ಧ ಕೇಸ್ ದಾಖಲು ಮಾಡಿ ಎಂದು ಸಿಎಂ ಸಿದ್ದರಾಮಯ್ಯಗೆ ವಿಪಕ್ಷನಾಯಕ ಅಶೋಕ್ ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಡ್ರೈವಿಂಗ್ ಹೇಳಿಕೊಡುವ ನೆಪದಲ್ಲಿ ಖಾಸಗಿ ಅಂಗ ತೋರಿಸಿ ಕಿರುಕುಳ ನೀಡಿದ ಟ್ರೈನರ್ ಅರೆಸ್ಟ್..!