ವಿಜಯನಗರ : ಸರ್ಕಾರಿ ಕೆಲಸಕ್ಕೆ ನೀಡಿದ ಗಂಡನ ಕಾರಿನಲ್ಲಿ ಹೆಂಡತಿ ಕಾರುಬಾರು ಮಾಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ವೀಕೆಂಡ್ನಲ್ಲಿ ತುಂಗಾಭದ್ರಾ ಡ್ಯಾಂ ನೋಡೊಕೆ ಗಂಡನ ಸರ್ಕಾರಿ ಕಾರಿನಲ್ಲಿ ಸ್ನೇಹಿತೆಯರನ್ನೂ ತುಂಬಿಕೊಂಡು ಸಿಕ್ಕ ಸಿಕ್ಕಲ್ಲಿ ಸರ್ಕಾರಿ ಆಫೀಸರ್ ಹೆಂಡತಿ ಸುತ್ತುತ್ತಿದ್ದಾಳೆ.
ಟೀ, ಕಾಫಿ, ಊಟಕ್ಕೆ ಹೋದ್ರೂ ಸರ್ಕಾರಿ ವಾಹನಗಳ ದುರ್ಬಳಕೆ ಮಾಡಿಕೊಳ್ತಾಯಿದ್ದಾರೆ. ಸರ್ಕಾರಿ ವಾಹನದಲ್ಲಿ ಇಷ್ಟೊಂದು ಜನರನ್ನ ಕರೆತಂದಿದ್ದಿರಲ್ಲ ಅಂತ ಪ್ರಶ್ನಿಸಿದ್ರೆ ಚಾಲಕ ವಾಗ್ವಾದ ಮಾಡಿದ್ದು ಗಂಡ ಹೇಳಿದ್ದಕ್ಕೆ ಮೇಡಂ ಮತ್ತೆ ಅವರ ಸ್ನೇಹಿತರನ್ನ ಕರ್ಕೊಂಡು ಬಂದಿದ್ದೇವೆ ಅಂತಾ ಹೇಳಿದ್ದಾರೆ. ಜನ ಸಾಮಾನ್ಯರಿಗೆ ಒಂದು ನ್ಯಾಯ, ಅಧಿಕಾರಿಗಳ ಹೆಂಡತಿಗೆ ಒಂದು ನ್ಯಾಯಾನಾ ಅಂತಾ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ : ಧಾರಾಕಾರ ಮಳೆಗೆ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಸಂಪೂರ್ಣ ಮುಳುಗಡೆ..!
Post Views: 84