ಬೆಂಗಳೂರು : ಬೆಂಗಳೂರಲ್ಲಿ ಕಿಡಿಗೇಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಮನೆ ಮುಂದೆ ನಿಲ್ಲಿಸಿದ ಕಾರು ಜಖಂಗೊಳಿಸಿ ವ್ಯಕ್ತಿ ಮೇಲೆ ಹಲ್ಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಸಮೀಪದ ತುಂಗಾನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಭಾನುವಾರ ರಾತ್ರಿ ಶಿವಗಂಗೇಗೌಡ ಎಂಬುವವರ ಮನೆ ಮುಂದೆ ಗ್ಯಾಂಗ್ವೊಂದು ಎಣ್ಣೆ ಹಾಕುತ್ತಿದ್ದರು. ಈ ವೇಳೆ ಶಿವಗಂಗೆಗೌಡರು ಪ್ರಶ್ನೆ ಮಾಡಿ ಎದ್ದು ಹೋಗುವಂತೆ ಗದರಿದ್ದರು. ಇದರಿಂದ ಸಿಟ್ಟಿಗೆದ್ದ ಗ್ಯಾಂಗ್, ಇನ್ನೋವಾ ಕಾರಿನ ಮೇಲೆ ಸಿಮೆಂಟ್ ಇಟ್ಟಿಗೆ ಎಸೆದು ಕಿರಿಕ್ ಮಾಡಿದಲ್ಲದೇ, ಶಿವಗಂಗೆಗೌಡ ಮೇಲೂ ಅಟ್ಯಾಕ್ ಮಾಡಿದೆ.
ಇನ್ನು ಕಿಡಿಗೇಡಿಗಳ ಅಟ್ಟಹಾಸದ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಸಿಸಿಟಿವಿ ದೃಶ್ಯ ಆಧಾರಿಸಿ, ಬ್ಯಾಡರಹಳ್ಳಿ ಪೊಲೀಸರು ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ಸೆಟಲ್ಮೆಂಟ್ ಮೂಲಕ ಕೋಟ್ಯಾಂತರ ರೂ. ಅಕ್ರಮ – ಮುಡಾ ಹಣಕಾಸು ವ್ಯವಹಾರದ ಮೊದಲ ವಿಡಿಯೋ ಬಿಟಿವಿಗೆ ಲಭ್ಯ..!
Post Views: 108