ದಾವಣಗೆರೆ : ಸಿಎಂ ಪತ್ನಿ ಸೈಟ್ ವಾಪಸ್ ಕೊಟ್ಟಿದ್ದರಲ್ಲಿ ತಪ್ಪಿಲ್ಲ, ಸಿಎಂ ಗೌರವ ಮುಖ್ಯ ಹೀಗಾಗಿ ಸೈಟ್ ವಾಪಸ್ ನೀಡಿದ್ದಾರೆ. ಮರ್ಯಾದೆಗೋಸ್ಕರ ಮರಳಿ ಕೊಟ್ಟಿದ್ದು ಯೂಟರ್ನ್ ಅಲ್ಲ, ಮುಡಾ ಸೈಟ್ ಕೊಟ್ಟಿದ್ದು ಬೊಮ್ಮಾಯಿ ಸರ್ಕಾರ. ವಾಪಸ್ ಕೊಡಬಾರದು ಅಂತಾ ರೂಲ್ಸ್ ಇದೆಯಾ? ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿ, 40 ವರ್ಷದಿಂದ ನೋಡಿದ್ದೇನೆ ಸಿಎಂ ಪತ್ನಿ ಒಂದು ದಿನ ಹೊರಗೆ ಬಂದಿಲ್ಲ. ಲೋಕಾಯುಕ್ತ, ಇಡಿ ಇವೆಲ್ಲಾ ವಿಚಾರಣೆ ಆಗ್ತಾ ಇದೆ, ಸಿಎಂ ಸಿದ್ದು ಗೌರವ ಉಳಿಸಲು ಸೈಟ್ ವಾಪಸ್ ನೀಡಿದ್ದಾರೆ. ಕಾನೂನು ಬದ್ಧವಾಗಿ ಅಣ್ಣ ತಂಗಿಗೆ ಕಾಣಿಕೆ ಕೊಟ್ಟಿದ್ರು, ಮುಡಾಗೆ ಅವರ ಜಮೀನು ಸ್ವಾಧೀನ ಮಾಡಿಕೊಂಡಿತ್ತು. ಇಡಿ ಎಂಟ್ರಿ ಆಗಲು ದುಡ್ಡಿನ ವ್ಯವಹಾರ ನಡೆದಿದೆಯಾ? 8000 ಕೋಟಿ ಎಲೆಕ್ಟೋರಲ್ ಬಾಂಡ್ನಲ್ಲಿ ಯಾಕೆ ವಿಚಾರಣೆ ಮಾಡಲ್ಲ ಎಂದಿದ್ದಾರೆ.
ಸುಮೋಟೋ ಕೇಸ್ ದಾಖಲಿಸಿ ಬಾಂಡ್ ತನಿಖೆ ಮಾಡಲಿ, ಕೇಂದ್ರದ 29 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ಗಳಿವೆ. ಅವರು ರಾಜಿನಾಮೆ ಕೊಡೋದು ಬೇಡ್ವಾ ಹಾಗಾದ್ರೆ..? BSY ವಿರುದ್ಧ ಲೋಕಾಯುಕ್ತ ವರದಿ ಇದ್ದ ಕಾರಣಕ್ಕೆ ರಿಸೈನ್ ಮಾಡಿದ್ರು. ಇಲ್ಲಿ ಗವರ್ನರ್ ಮೂಲಕ ಪ್ರಕರಣವನ್ನು ತರಲಾಗಿದೆ, ಮುಡಾ ವಿಚಾರದಲ್ಲಿ ರಾಜಕೀಯ ಕುತಂತ್ರ ಇದೆ. ಸಿಎಂ ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಇದನ್ನೂ ಓದಿ : ಪ್ಯಾರಾಸೈಕಾಲಜಿಕಲ್ ಥ್ರಿಲ್ಲರ್ ಮೂವಿ ‘ನಿಮಿತ್ತ ಮಾತ್ರ’ – ಮಂಗಳೂರಿನ ಅತೀವ ಭಯಾನಕ ಘಟನೆಯೇ ಚಿತ್ರದ ಕಥಾಹಂದರ..!