Download Our App

Follow us

Home » ರಾಜಕೀಯ » ಸಿಎಂ ಪತ್ನಿ ಸೈಟ್​ ವಾಪಸ್​ ಕೊಟ್ಟಿದ್ದರಲ್ಲಿ ತಪ್ಪಿಲ್ಲ – ಸಚಿವ ಸಂತೋಷ್ ಲಾಡ್..!

ಸಿಎಂ ಪತ್ನಿ ಸೈಟ್​ ವಾಪಸ್​ ಕೊಟ್ಟಿದ್ದರಲ್ಲಿ ತಪ್ಪಿಲ್ಲ – ಸಚಿವ ಸಂತೋಷ್ ಲಾಡ್..!

ದಾವಣಗೆರೆ : ಸಿಎಂ ಪತ್ನಿ ಸೈಟ್​ ವಾಪಸ್​ ಕೊಟ್ಟಿದ್ದರಲ್ಲಿ ತಪ್ಪಿಲ್ಲ, ಸಿಎಂ ಗೌರವ ಮುಖ್ಯ ಹೀಗಾಗಿ ಸೈಟ್ ವಾಪಸ್ ನೀಡಿದ್ದಾರೆ. ಮರ್ಯಾದೆಗೋಸ್ಕರ ಮರಳಿ ಕೊಟ್ಟಿದ್ದು ಯೂಟರ್ನ್​​ ಅಲ್ಲ, ಮುಡಾ ಸೈಟ್ ಕೊಟ್ಟಿದ್ದು ಬೊಮ್ಮಾಯಿ ಸರ್ಕಾರ. ವಾಪಸ್​ ಕೊಡಬಾರದು ಅಂತಾ ರೂಲ್ಸ್ ಇದೆಯಾ? ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್​ ಮಾತನಾಡಿ, 40 ವರ್ಷದಿಂದ ನೋಡಿದ್ದೇನೆ ಸಿಎಂ ಪತ್ನಿ ಒಂದು ದಿನ ಹೊರಗೆ ಬಂದಿಲ್ಲ. ಲೋಕಾಯುಕ್ತ, ಇಡಿ ಇವೆಲ್ಲಾ ವಿಚಾರಣೆ ಆಗ್ತಾ ಇದೆ, ಸಿಎಂ ಸಿದ್ದು ಗೌರವ ಉಳಿಸಲು ಸೈಟ್ ವಾಪಸ್​ ನೀಡಿದ್ದಾರೆ. ಕಾನೂನು ಬದ್ಧವಾಗಿ ಅಣ್ಣ ತಂಗಿಗೆ ಕಾಣಿಕೆ ಕೊಟ್ಟಿದ್ರು, ಮುಡಾಗೆ ಅವರ ಜಮೀನು ಸ್ವಾಧೀನ ಮಾಡಿಕೊಂಡಿತ್ತು. ಇಡಿ ಎಂಟ್ರಿ ಆಗಲು ದುಡ್ಡಿನ ವ್ಯವಹಾರ ನಡೆದಿದೆಯಾ? 8000 ಕೋಟಿ ಎಲೆಕ್ಟೋರಲ್​​ ಬಾಂಡ್​ನಲ್ಲಿ ಯಾಕೆ ವಿಚಾರಣೆ ಮಾಡಲ್ಲ ಎಂದಿದ್ದಾರೆ.

ಸುಮೋಟೋ ಕೇಸ್ ದಾಖಲಿಸಿ ಬಾಂಡ್​ ತನಿಖೆ ಮಾಡಲಿ, ಕೇಂದ್ರದ 29 ಸಚಿವರ ವಿರುದ್ಧ ಕ್ರಿಮಿನಲ್​ ಕೇಸ್​ಗಳಿವೆ. ಅವರು ರಾಜಿನಾಮೆ ಕೊಡೋದು ಬೇಡ್ವಾ ಹಾಗಾದ್ರೆ..? BSY ವಿರುದ್ಧ ಲೋಕಾಯುಕ್ತ ವರದಿ ಇದ್ದ ಕಾರಣಕ್ಕೆ ರಿಸೈನ್ ಮಾಡಿದ್ರು. ಇಲ್ಲಿ ಗವರ್ನರ್​ ಮೂಲಕ ಪ್ರಕರಣವನ್ನು ತರಲಾಗಿದೆ, ಮುಡಾ ವಿಚಾರದಲ್ಲಿ ರಾಜಕೀಯ ಕುತಂತ್ರ ಇದೆ. ಸಿಎಂ ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಇದನ್ನೂ ಓದಿ : ಪ್ಯಾರಾಸೈಕಾಲಜಿಕಲ್ ಥ್ರಿಲ್ಲರ್ ಮೂವಿ ‘ನಿಮಿತ್ತ ಮಾತ್ರ’ – ಮಂಗಳೂರಿನ ಅತೀವ ಭಯಾನಕ ಘಟನೆಯೇ ಚಿತ್ರದ ಕಥಾಹಂದರ..!

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here