ಮೈಕ್ರೋಸಾಫ್ಟ್ ವಿಂಡೋಸ್ ಕೈಕೊಟ್ಟ ಕಾರಣ ಇಡೀ ಜಗತ್ತು ಅಲ್ಲೋಲ-ಕಲ್ಲೋಲವಾಗಿದೆ. ಕಂಪ್ಯೂಟರ್ಗಳು ಆನ್ ಆಗದೇ ಅಮೆರಿಕ, ಭಾರತ, ಆಸ್ಟ್ರೇಲಿಯಾ ಸೇರಿ ದೊಡ್ಡ ರಾಷ್ಟ್ರಗಳೇ ಅಸ್ತವ್ಯಸ್ತವಾಗಿವೆ.
ಕ್ರೌಡ್ಸ್ಟ್ರೈಕ್ ಸಾಫ್ಟ್ವೇರ್ ಅಪ್ಡೇಟ್ನಲ್ಲಿ ಇದೊಂದು ದೊಡ್ಡ ಎಡವಟ್ಟು ನಡೆದಿದೆ. ವಿಮಾನ ನಿಲ್ದಾಣಗಳು, ವಿಮಾನ ಸೇವೆಗಳು, ಷೇರು ಮಾರುಕಟ್ಟೆಗಳು, ಬ್ಯಾಂಕಿಂಗ್ ಸೇವೆಗಳು, ಹೋಟೆಲ್ ಸೇವೆಗಳು ಸೇರಿದಂತೆ ಎಲ್ಲಾ ರೀತಿಯ ಸೇವೆಗಳಲ್ಲಿ ವ್ಯತ್ಯಯ ಕಂಡುಬಂದಿವೆ. ಭಾರತ ಸೇರಿದಂತೆ ಹಲವಾರು ದೇಶಗಳ ಸರ್ಕಾರಿ ಕಚೇರಿಗಳಲ್ಲಿನ ಸೇವಾ ಕೇಂದ್ರಗಳೂ ಸ್ವಯಂಚಾಲಿತವಾಗಿ ಸ್ತಬ್ಧವಾಗಿತ್ತು.
ಅಪ್ಡೇಟ್ ಬಳಿಕ ಸಿಸ್ಟಮ್ಸ್ ಮತ್ತೆ-ಮತ್ತೆ ಆನ್ ಅಂಡ್ ಆಫ್ ಆಗ್ತಿದೆ. BOSD(ಬ್ಲೂ ಸ್ಕ್ರೀನ್ ಆಫ್ ಡೆತ್) ಎಂದು ಸಿಸ್ಟಮ್ಸ್ ಮೆಸೇಜ್ ತೋರಿಸುತ್ತಿದೆ. ಮೇಜರ್ ಬ್ಯಾಂಕ್ಗಳು, ವಿಮಾನಯಾನ ಸಂಸ್ಥೆಗಳಿಗೆ ಭಾರೀ ಎಫೆಕ್ಟ್ ಆಗಿದ್ದು, ಇಂಗ್ಲೆಂಡ್ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಸ್ಥಗಿತವಾಗಿದೆ. ಅಮೆರಿಕದ ಎಮೆರ್ಜೆನ್ಸಿ ಹೆಲ್ಫ್ಲೈನ್ ಸೇವೆಯೂ ಅಸ್ತವ್ಯಸ್ತವಾಗಿದೆ.
ಆಸ್ಟ್ರೇಲಿಯಾದ ಬ್ಯಾಂಕಿಂಗ್, ವಿಮಾನ, ಷೇರು ಮಾರ್ಕೆಟ್ಗೂ ಹೊಡೆತ ಬಿದ್ದಿದ್ದು, ವಿಂಡೋಸ್-10, ವಿಂಡೋಸ್-11ಗೆ ಭಾರೀ ಪ್ರಾಬ್ಲಂ ಎದುರಾಗಿದೆ. ಭಾರತದಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಭಾರತದ ಪ್ರಮುಖ ವಿಮಾನ ಸೇವಾ ಸಂಸ್ಥೆಗಳಾದ ಸ್ಪೈಸ್ ಜೆಟ್, ಆಕಾಶ ಏರ್ ಲೈನ್ಸ್ ಸಂಸ್ಥೆಗಳು ಮೈಕ್ರೋಸಾಫ್ಟ್ ಸಾಫ್ಟ್ ವೇರ್ ನಲ್ಲಿ ಕಾಣಿಸಿಕೊಂಡಿರುವ ದೋಷದಿಂದಾಗಿ ತಮ್ಮ ಸಂಸ್ಥೆಯ ಅನೇಕ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಅತ್ಹರ್ ಅಲಿ ಮೇಲೆ ಲೋಕಾ ರೇಡ್ – 25 ಲಕ್ಷ ಕ್ಯಾಶ್, ಕೋಟ್ಯಾಂತರ ಮೌಲ್ಯದ ಚಿನ್ನ-ಬೆಳ್ಳಿ, ಡೈಮಂಡ್ ನೆಕ್ಲೆಸ್ ವಶಕ್ಕೆ..!