ಬೆಂಗಳೂರು : ಭ್ರಷ್ಟ ಅಧಿಕಾರಿಗಳಿಗೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಬಿಸಿ ಮುಟ್ಟಿಸಿದೆ. ರಾಜ್ಯದ 12 ಜನ ಭ್ರಷ್ಟ ಅಧಿಕಾರಿಗಳಿಗೆ ಸೇರಿದ 54 ಕಡೆಗಳಲ್ಲಿ 100ಕ್ಕೂ ಹೆಚ್ಚು ಲೋಕಾ ಅಧಿಕಾರಿಗಳು ಮುಂಜಾನೆ ರೇಡ್ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ.
ಬೆಂಗಳೂರಿನ ಕಾನೂನು ಮಾಪನ ಇಲಾಖೆ ಡೆಪ್ಯುಟಿ ಕಂಟ್ರೋಲರ್ ಅತ್ಹರ್ ಅಲಿ ಎಂಬವರ ನಿವಾಸ ಮತ್ತು ಕಚೇರಿ ಮೇಲೆ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಂಜಾನೆ 5:30ರ ಹೊತ್ತಿಗೆ ಕಲ್ಯಾಣ ನಗರದಲ್ಲಿರುವ ನಿವಾಸಕ್ಕೆ ತೆರಳಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು 5 ಗಂಟೆಗಳಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ಅತ್ಹರ್ ಆಲಿ ಮನೆಯಲ್ಲಿ ಕೆಜಿ-ಕೆಜಿ ಚಿನ್ನ, ಕಂತೆ-ಕಂತೆ ಹಣ ಪತ್ತೆಯಾಗಿದೆ. ಬೆಳ್ಳಿ ಲೋಟ, ಬೆಳ್ಳಿ ನಾಣ್ಯ, ಬೆಳ್ಳಿ ತಟ್ಟೆ, ಸೇರಿ 2 ಕೆಜಿ ಬೆಳ್ಳಿ ಸಾಮಗ್ರಿಗಳು ಶೋಧದ ವೇಳೆ ಪತ್ತೆಯಾಗಿದೆ. ಜೊತೆಗೆ 20 ಲಕ್ಷ ಮೌಲ್ಯದ ಫಾರಿನ್ ವಾಚ್ಗಳು, ಫಾರಿನ್ ಕರೆನ್ಸಿಗಳು ಕೂಡ ಪತ್ತೆಯಾಗಿದೆ.
ಅಧಿಕಾರಿಗಳು ಮನೆಗೆ ಎಂಟ್ರಿ ನೀಡುತ್ತಿದ್ದಂತೆ ಅತ್ಹರ್ ಆಲಿ ಅವರು ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಎಸೆದಿದ್ದರು. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಇವರ ಮೊದಲ ಅಂತಸ್ತು ಇತ್ತು. ಅಲ್ಲಿಂದ ಪಕ್ಕದ ಮನೆ ಕಿಟಕಿ ಒಳಗೆ ಬ್ಯಾಗ್‌ಗೆ ತುಂಬಿ ಚಿನ್ನ ಎಸೆದಿದ್ದರು. ಬ್ಯಾಗ್ ಎಸೆದಿದ್ದನ್ನ ನೋಡಿ ನೆರೆಮನೆ ನಿವಾಸಿ ಖುದ್ದು ಅಧಿಕಾರಿಗಳನ್ನ ಕರೆದಿದ್ದಾರೆ. ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ನಂತರ ಅಧಿಕಾರಿಗಳು ಬ್ಯಾಗ್ ವಶಕ್ಕೆ ಪಡೆದಿದ್ದಾರೆ. ಸದ್ಯ ಅಧಿಕಾರಿಗಳ ತಂಡ ತಲಾಶ್ ಮುಂದುವರಿಸಿದೆ.
ಅತ್ಹರ್ ಅಲಿ ಮನೆಯಲ್ಲಿ ಸಿಕ್ಕಿದ್ದೇನು?
25 ಲಕ್ಷ ನಗದು
2.2 ಕೆ.ಜಿ ಚಿನ್ನಾಭರಣ
2 ಕೆ.ಜಿ ಬೆಳ್ಳಿ ಸಾಮಗ್ರಿ
40ಕ್ಕೂ ಹೆಚ್ಚು ವಾಚ್ಗಳು
ವಿದೇಶಿ ನೋಟುಗಳು
ಡೈಮಂಡ್ ನೆಕ್ಲೆಸ್ಗಳು
ಇದನ್ನೂ ಓದಿ : ಮಂಗಳೂರು : ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ವಿದ್ಯಾರ್ಥಿನಿ ಸಾ*ವು..!