ವಯನಾಡು : ಕೇರಳದ ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆ ತೆಲುಗು ನಟ ಚಿರಂಜೀವಿ ಮತ್ತು ಅವರ ಮಗ, ‘ಆರ್ಆರ್ಆರ್’ ಖ್ಯಾತಿಯ ರಾಮ ಚರಣ್ ₹1 ಕೋಟಿ ದೇಣಿಗೆ ನೀಡಿದ್ದಾರೆ.
ಭೂಕುಸಿತದಿಂದ ನೂರಾರು ಮಂದಿ ಮೃತಪಟ್ಟಿರುವ ಕುರಿತಂತೆ ಚಿರಂಜೀವಿ ಎಕ್ಸ್ ಪೋಸ್ಟ್ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. ‘ಕಳೆದ ಕೆಲ ದಿನಗಳಿಂದ ಕೇರಳದಲ್ಲಿ ಸಂಭವಿಸಿರುವ ನೈಸರ್ಗಿಕ ವಿಕೋಪದಲ್ಲಿ ನೂರಾರು ಅಮೂಲ್ಯ ಜೀವಗಳ ಹಾನಿಯಾಗಿದೆ. ಈ ವಿನಾಶವನ್ನು ನೋಡಿ ತೀವ್ರವಾಗಿ ನೊಂದಿದ್ದೇನೆ. ವಯನಾಡು ದುರಂತ ಕಂಡು ನನ್ನ ಹೃದಯ ಮಿಡಿಯುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
‘ನಾನು ಮತ್ತು ಚರಣ್ ಸೇರಿ ಸಂತ್ರಸ್ತರ ನೆರವಿಗಾಗಿ ₹1 ಕೋಟಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇವೆ. ನೋವಿನಲ್ಲಿರುವ ಎಲ್ಲರೂ ಶೀಘ್ರ ಚೇತರಿಸಿಕೊಳ್ಳಲೆಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಚಿರಂಜೀವಿ ಹೇಳಿದ್ದಾರೆ..
ಇದನ್ನೂ ಓದಿ : ಸಿಎಂ ಆದೇಶಕ್ಕೂ ಇಲ್ಲ ಕಿಮ್ಮತ್ತು – ನಿವೃತ್ತ ಅಧಿಕಾರಿಯನ್ನೇ 2 ವರ್ಷ ಸೇವೆಯಲ್ಲಿ ಮುಂದುವರಿಸಲು ಜಮೀರ್ ಅಹ್ಮದ್ ಸೂಚನೆ..!