Download Our App

Follow us

Home » ಸಿನಿಮಾ » ವಯನಾಡು ಭೂಕುಸಿತದ ಸಂತ್ರಸ್ತರಿಗೆ ನೆರವಾದ ಮೆಗಾಸ್ಟಾರ್ ಫ್ಯಾಮಿಲಿ, ಭಾರೀ ದೇಣಿಗೆ ಘೋಷಣೆ..!

ವಯನಾಡು ಭೂಕುಸಿತದ ಸಂತ್ರಸ್ತರಿಗೆ ನೆರವಾದ ಮೆಗಾಸ್ಟಾರ್ ಫ್ಯಾಮಿಲಿ, ಭಾರೀ ದೇಣಿಗೆ ಘೋಷಣೆ..!

ವಯನಾಡು : ಕೇರಳದ ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆ ತೆಲುಗು ನಟ ಚಿರಂಜೀವಿ ಮತ್ತು ಅವರ ಮಗ, ‘ಆರ್‌ಆರ್‌ಆರ್‌’ ಖ್ಯಾತಿಯ ರಾಮ ಚರಣ್ ₹1 ಕೋಟಿ ದೇಣಿಗೆ ನೀಡಿದ್ದಾರೆ.

ಭೂಕುಸಿತದಿಂದ ನೂರಾರು ಮಂದಿ ಮೃತಪಟ್ಟಿರುವ ಕುರಿತಂತೆ ಚಿರಂಜೀವಿ ಎಕ್ಸ್ ಪೋಸ್ಟ್ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. ‘ಕಳೆದ ಕೆಲ ದಿನಗಳಿಂದ ಕೇರಳದಲ್ಲಿ ಸಂಭವಿಸಿರುವ ನೈಸರ್ಗಿಕ ವಿಕೋಪದಲ್ಲಿ ನೂರಾರು ಅಮೂಲ್ಯ ಜೀವಗಳ ಹಾನಿಯಾಗಿದೆ. ಈ ವಿನಾಶವನ್ನು ನೋಡಿ ತೀವ್ರವಾಗಿ ನೊಂದಿದ್ದೇನೆ. ವಯನಾಡು ದುರಂತ ಕಂಡು ನನ್ನ ಹೃದಯ ಮಿಡಿಯುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

‘ನಾನು ಮತ್ತು ಚರಣ್ ಸೇರಿ ಸಂತ್ರಸ್ತರ ನೆರವಿಗಾಗಿ ₹1 ಕೋಟಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇವೆ. ನೋವಿನಲ್ಲಿರುವ ಎಲ್ಲರೂ ಶೀಘ್ರ ಚೇತರಿಸಿಕೊಳ್ಳಲೆಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಚಿರಂಜೀವಿ ಹೇಳಿದ್ದಾರೆ..

ಇದನ್ನೂ ಓದಿ : ಸಿಎಂ ಆದೇಶಕ್ಕೂ ಇಲ್ಲ ಕಿಮ್ಮತ್ತು – ನಿವೃತ್ತ ಅಧಿಕಾರಿಯನ್ನೇ 2 ವರ್ಷ ಸೇವೆಯಲ್ಲಿ ಮುಂದುವರಿಸಲು ಜಮೀರ್ ಅಹ್ಮದ್ ಸೂಚನೆ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿನ ವಿದ್ಯಾರ್ಥಿ ಕೇರಳದಲ್ಲಿ ನಿಫಾ ವೈರಸ್​ಗೆ ಬಲಿ – ರಾಜ್ಯದಲ್ಲಿ ಹೆಚ್ಚಿದ ಆತಂಕ..!

ಬೆಂಗಳೂರು : ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್​ಗೆ ಬಲಿಯಾಗಿದ್ದಾನೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲಪ್ಪುರಂನ ವಿದ್ಯಾರ್ಥಿ ಊರಿಗೆ ಹೋಗಿದ್ದಾಗ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಕಳೆದ

Live Cricket

Add Your Heading Text Here