Download Our App

Follow us

Home » ಕ್ರೀಡೆ » ಹ್ಯಾಟ್ರಿಕ್‌ ಪದಕದ ಮೇಲೆ ಮನು ಭಾಕರ್ ಗುರಿ – ಇಂದು 25ಮೀ ಏರ್ ಪಿಸ್ತೂಲ್ ಫೈನಲ್, ಎಷ್ಟು ಗಂಟೆಗೆ?

ಹ್ಯಾಟ್ರಿಕ್‌ ಪದಕದ ಮೇಲೆ ಮನು ಭಾಕರ್ ಗುರಿ – ಇಂದು 25ಮೀ ಏರ್ ಪಿಸ್ತೂಲ್ ಫೈನಲ್, ಎಷ್ಟು ಗಂಟೆಗೆ?

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2024ರ ಕ್ರೀಡಾಕೂಟದಲ್ಲಿ ಶೂಟರ್ ಮನು ಭಾಕರ್ ಭಾರತಕ್ಕೆ ಮೂರನೇ ಪದಕ ಗೆದ್ದು ಕೊಡುವ ಭರವಸೆ ಮೂಡಿಸಿದ್ದಾರೆ. ಮನು ಭಾಕರ್ ಅವರು ಒಲಿಂಪಿಲಕ್ಸ್​ನಲ್ಲಿ ತನ್ನ ಅತ್ಯದ್ಭುತ ಪ್ರದರ್ಶನ ಮುಂದುವರಿಸಿದ್ದು, ನಿನ್ನೆ ನಡೆದ 25ಮೀ ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್ ಸುತ್ತಿಗೆ ಎಂಟ್ರಿ ಕೊಟ್ಟಿದ್ದಾರೆ.

25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮನು, ಸುಲಭವಾಗಿ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಪ್ಯಾರಿಸ್ ಒಲಿಂಪಿಲಕ್ಸ್​ನಲ್ಲಿ ಈಗಾಗಲೇ ಎರಡು ಪದಕ ಗೆದ್ದುಕೊಂಡಿರುವ ಮನು ಭಾಕರ್, ಇದೀಗ ಹ್ಯಾಟ್ರಿಕ್ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇಂದು (ಶನಿವಾರ) ಮಧ್ಯಾಹ್ನ 1 ಗಂಟೆಗೆ 25 ಮೀಟರ್ ಏರ್ ಪಿಸ್ತೂಲ್​ನ ಫೈನಲ್ ಪಂದ್ಯ ನಡೆಯಲಿದೆ.

ಸದ್ಯ ಮೂರನೇ ಪದಕವೂ ಅವರ ಕೊರಳಿಗೇರುವ ನಿರೀಕ್ಷೆ ಅಪಾರವಾಗಿದ್ದು, 25 ಮೀ ಏರ್‌ ಪಿಸ್ತೂಲ್ ವಿಭಾಗದ ಸ್ಪರ್ಧೆಯು ಅವರಿಗೆ ಅತ್ಯಂತ ನೆಚ್ಚಿನದ್ದಾಗಿದೆ. ಈ ಹಿಂದೆ ನಡೆದ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಈ ವಿಭಾಗಗಳಲ್ಲಿಯೇ ಮನು ಉತ್ತಮ ಸಾಧನೆ ಮಾಡಿದ್ದಾರೆ.

ಇತಿಹಾಸ ಸೃಷ್ಟಿಸುವ ಅವಕಾಶ : ಮನು ಭಾಕರ್ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪದಕ ಗೆದ್ದರೆ ಇತಿಹಾಸ ಸೃಷ್ಟಿಸಲಿದ್ದಾರೆ. ಹಿಂದೆಂದೂ ಯಾವುದೇ ಭಾರತೀಯ ಸ್ಪರ್ಧಿ ಒಲಿಂಪಿಕ್ಸ್‌ನಲ್ಲಿ ಸತತ ಮೂರು ಪದಕಗಳನ್ನು ಗೆದ್ದಿಲ್ಲ. ಹೀಗಾಗಿ ಮನು ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರೆ, ಭಾರತದ ಪರ ಈ ಸಾಧನೆ ಮಾಡಿದ ಮೊದಲ ಅಥ್ಲೀಟ್ ಎನಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ತುಮಕೂರು ವಾರ್ತಾಧಿಕಾರಿ ಎಂ.ಆರ್. ಮಮತಾ ನಿಧನ – ಇಂದು ಅಂತ್ಯಕ್ರಿಯೆ..!  

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here