ಕೋಲಾರ : K.H ಮುನಿಯಪ್ಪಗೆ ಮತ್ತೆ ಶಾಸಕ ಕೊತ್ತೂರು ಮಂಜುನಾಥ್ ಟಾಂಗ್ ಕೊಟ್ಟಿದ್ದಾರೆ. ಡೂಪ್ಲಿಕೇಟ್ ಕಾಂಗ್ರೆಸ್ ಮುಖಂಡರಿಗೆ ನಿಗಮ-ಮಂಡಳಿ ಸ್ಥಾನ ತಪ್ಪಿಸಿದ್ದು ನಾವೇ, ಮುನ್ಸಿಪಲ್ ಚುನಾವಣೆಯಲ್ಲಿ ಗೆಲ್ಲಲಾಗದವರಿಗೆ ಸ್ಥಾನ ತಪ್ಪಿಸಿದ್ದೆವು ಎಂದು ಹೇಳಿದ್ದಾರೆ.
ಈ ಬಗ್ಗೆ ಕೋಲಾರದಲ್ಲಿ ಕೊತ್ತೂರು ಮಂಜುನಾಥ್ ಮಾತನಾಡಿ, ಪಕ್ಷಕ್ಕಾಗಿ ಯಾರು ದುಡಿದಿದ್ದಾರೆ, ದುಡಿದಿಲ್ಲ ಅನ್ನೋದು ಹೈಕಮಾಂಡ್ಗೆ ಗೊತ್ತಿದೆ. ನಗರಸಭೆ ಚುನಾವಣೆಯಲ್ಲಿ ಯಾರು ಡಿಪಾಸಿಟ್ ತಗೊಂಡಿಲ್ಲ ಗೊತ್ತು, ಅಸೆಂಬ್ಲಿ ಎಲೆಕ್ಷನ್ನಲ್ಲಿ ಅವರು ಯಾರಿಗೆ ಸಪೋರ್ಟ್ ಮಾಡಿದ್ರು. ಯಾರ ಪರ ಕೆಲಸ ಮಾಡಿದರು ಅನ್ನುವುದು ಗೊತ್ತಿದೆ ಎಂದು ಮುನಿಯಪ್ಪ ಬೆಂಬಲಿಗರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.
ಮುನಿಯಪ್ಪ ಪರ ಲೋಕಸಭೆ ಎಲೆಕ್ಷನ್ನಲ್ಲಿ ನಾನು ಕೆಲಸ ಮಾಡಿದೆ, ಅಸೆಂಬ್ಲಿ ಎಲೆಕ್ಷನ್ನಲ್ಲಿ ಅವರು ಯಾರ ಪರ ಕೆಲಸ ಮಾಡಿದ್ರು..? ತಾಕತ್ತಿದ್ದರೆ ಮುಂದಿನ ಎಲೆಕ್ಷನ್ಗಳಲ್ಲಿ ಗೆದ್ದು ತೋರಿಸಲಿ. ಇನ್ಮುಂದೆ ನಾವೂ ಮಾತ್ನಾಡ್ತೇವೆ, ನಮಗೂ ರಾಜಕೀಯ ಮಾಡಲು ಗೊತ್ತು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಗೆ ಗ್ರೀನ್ ಸಿಗ್ನಲ್..!