Download Our App

Follow us

Home » ಕ್ರೀಡೆ » ಮಂಗಳೂರು ಕದ್ರಿ ದೇಗುಲದಲ್ಲಿ ಯುವಕನ ಹುಚ್ಚಾಟ – ಬೈಕ್​​ನಲ್ಲೇ ದೇಗುಲದ ಒಳಗೆ ನುಗ್ಗಿ ಅಪಚಾರ..!

ಮಂಗಳೂರು ಕದ್ರಿ ದೇಗುಲದಲ್ಲಿ ಯುವಕನ ಹುಚ್ಚಾಟ – ಬೈಕ್​​ನಲ್ಲೇ ದೇಗುಲದ ಒಳಗೆ ನುಗ್ಗಿ ಅಪಚಾರ..!

ಮಂಗಳೂರು : ಮಂಗಳೂರಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಕದ್ರಿ ದೇಗುಲದಲ್ಲಿ ಯುವಕನೊಬ್ಬ ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ. ಬೈಕ್ ಚಲಾಯಿಸಿಕೊಂಡು ನೇರ ದೇವಸ್ಥಾನದ ಪ್ರಾಂಗಣದ ಒಳಗೆಯೇ ಯುವಕ ಪ್ರವೇಶಿಸಿದ್ದಾನೆ. ಬಳಿಕ ದೇವಸ್ಥಾನದಲ್ಲಿ ರಂಪಾಟ ಮಾಡಿದ್ದಾನೆ. ಇನ್ನು ಇದನ್ನೂ ಪ್ರಶ್ನೆ ಮಾಡಿದ ಅರ್ಚಕರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ.

ಅಷ್ಟೇ ಅಲ್ಲದೆ ದೈವದ ಕತ್ತಿಯನ್ನು ಕೈಗೆತ್ತಿಕೊಂಡು ಹುಚ್ಚಾಟ ಮೆರೆದಿದ್ದಾನೆ. ದೇವಸ್ಥಾನದ ಮಂಟಪದ ಮೇಲೇರಿ ಛಾವಣಿಗೂ ಹಾನಿ ಮಾಡಿ, ದಾಂಧಲೆ ನಡೆಸಿದ್ದ ಯುವಕನನ್ನ ಸ್ಥಳೀಯರು ಕಟ್ಟಿ ಹಾಕಿದ್ದರು.

ಸದ್ಯ ಘಟನೆ ಬಗ್ಗೆ ಕದ್ರಿ ಠಾಣೆಗೆ ದೇವಸ್ಥಾನದ ಮುಖ್ಯಾಧಿಕಾರಿ ದೂರು ನಿಡಿದ್ದು, ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈ ಯುವಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ‌ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ : ಜೈಲೂಟ ಸಾಕು.. ಮನೆ ಊಟ ಕೊಡಿಸಿ – ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here