Download Our App

Follow us

Home » ಅಪರಾಧ » ಮಂಗಳೂರು : ಬಿಜೆಪಿ ವಿಜಯೋತ್ಸವದ ಬಳಿಕ ಕಿಡಿಗೇಡಿಗಳಿಂದ ಅಟ್ಟಹಾಸ – ಇಬ್ಬರಿಗೆ ಚಾಕು ಇರಿತ..!

ಮಂಗಳೂರು : ಬಿಜೆಪಿ ವಿಜಯೋತ್ಸವದ ಬಳಿಕ ಕಿಡಿಗೇಡಿಗಳಿಂದ ಅಟ್ಟಹಾಸ – ಇಬ್ಬರಿಗೆ ಚಾಕು ಇರಿತ..!

ಮಂಗಳೂರು : ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬೋಳಿಯಾರು ಎಂಬಲ್ಲಿ ನಡೆದಿದೆ. ಸುರೇಶ್ ಮತ್ತು ನಂದಕುಮಾರ್ ಚಾಕು ಇರಿತಕ್ಕೊಳಗಾದವರಾಗಿದ್ದು, ಇವರಿಬ್ಬರೂ ಬೋಳಿಯಾರು ನಿವಾಸಿಗಳು.

ಭಾನುವಾರ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ವಿಜಯೋತ್ಸವ ಆಯೋಜಿಸಲಾಗಿತ್ತು. ವಿಜಯೋತ್ಸವ ಮುಗಿಸಿ ಸುರೇಶ್ ಮತ್ತು ನಂದಕುಮಾರ್ ಅವರು ಬೋಳಿಯಾರು ಪೇಟೆಯಲ್ಲಿ ನಿಂತಿದ್ದರು.

ಈ ವೇಳೆ ಅಪರಿಚಿತ ದುಷ್ಕರ್ಮಿಗಳ ತಂಡವು ಏಕಾಏಕಿ ಇಬ್ಬರಿಗೆ ಚಾಕುವಿನಿಂದ ಇರಿದಿದೆ. ಸದ್ಯ ಇಬ್ಬರಿಗೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣಪುಟ್ಟ ಗಾಯದೊಂದಿಗೆ ಇಬ್ಬರು ಪಾರಾಗಿದ್ದಾರೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಗಿಡ ಬೆಳೆಸೋ ಭರದಲ್ಲಿ ಬಿಬಿಎಂಪಿ ಎಡವಟ್ಟು – ಬೆಂಗಳೂರಿಗೆ ಕಂಟಕವಾದ ದುಬೈ ಗಿಡ..!

 

 

 

 

Leave a Comment

DG Ad

RELATED LATEST NEWS

Top Headlines

ಪಂಚಭೂತಗಳಲ್ಲಿ ಲೀನರಾದ ಮನಮೋಹನ್ ಸಿಂಗ್ – ಅಂತ್ಯವಾಯ್ತು ‘ಸಾಧಕ’ನ ಪರ್ವ..!

ನವದೆಹಲಿ : ಹೊಸ ಭಾರತ ನಿರ್ಮಾಣದ ಕನಸು ಕಂಡ ಕನಸುಗಾರ ಮನಮೋಹನ್ ಸಿಂಗ್ ಇನ್ನು ನೆನಪು ಮಾತ್ರ. ಡಿ.​ 26ರಂದು ಇಹಲೋಕ ಯಾತ್ರೆ ಮುಗಿಸಿದ ಭಾರತದ ಮಾಜಿ

Live Cricket

Add Your Heading Text Here