ಮಂಡ್ಯ : ಪತಿಯಿಂದಲೇ ಪತ್ನಿ ಭೀಕರವಾಗಿ ಹತ್ಯೆಯಾದ ಘಟನೆ ನಾಗಮಂಗಲ ತಾಲೂಕಿನ ಮಂಥನಹಳ್ಳಿ ಗ್ರಾಮದಲ್ಲಿ ನಡೆದಿದೆ. ತೇಜಸ್ವಿನಿ (38) ಕೊಲೆಯಾದ ದುರ್ದೈವಿ.
ಕೌಟುಂಬಿಕ ವಿಚಾರವಾಗಿ ದಂಪತಿಗಳ ನಡುವೆ ಜಗಳ ಶುರುವಾಗಿದ್ದು, ಬಳಿಕ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಕೋಪಗೊಂಡಿದ್ದ ಪತಿ ಜಯರಾಮು ತನ್ನ ಪತ್ನಿ ತೇಜಸ್ವಿನಿ ಕುತ್ತಿಗೆಗೆ ಸ್ಕ್ರೂ ಡ್ರೈವರ್ನಿಂದ ಚುಚ್ಚಿ, ಕೊಡಲಿಯಿಂದ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ತೇಜಸ್ವಿನಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಬಳಿಕ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಕೊಲೆ ಕೇಸಲ್ಲಿ ದರ್ಶನ್ಗೆ ಬಿಗ್ ಶಾಕ್ – A2ನಿಂದ A1 ಮಾಡಿ ಚಾರ್ಜ್ಶೀಟ್ ಸಲ್ಲಿಕೆಗೆ ಪೊಲೀಸರ ತಯಾರಿ..!
Post Views: 211