ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರೋ ನಟ ದರ್ಶನ್ಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದರು. ಪವಿತ್ರಾ ಗೌಡ ಎ1 ಆಗಿದ್ದರು. ಆದರೀಗ, ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿದ್ದು, ದರ್ಶನ್ ಅವರನ್ನು ಎ1 ಮಾಡುವುದು ಬಹುತೇಕ ಖಚಿತ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ದರ್ಶನ್ಗೆ ಸಂಕಷ್ಟ ಮತ್ತಷ್ಟು ಜಾಸ್ತಿ ಆಗಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನ ತನಿಖೆ ಈಗ ಕೊನೇ ಹಂತಕ್ಕೆ ಬಂದು ನಿಂತಿದ್ದು, ತನಿಖೆ ವೇಳೆ ನಟನ ವಿರುದ್ಧ ಹಲವು ಪ್ರಮುಖ ಸಾಕ್ಷಿಗಳು ದೊರೆತಿದೆ. ಹಾಗಾಗಿ ನಟ ದರ್ಶನ್ ಅವರೇ ಕೊಲೆ ಮಾಡಿಸಿರುವುದು ಎಂಬುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಎಲ್ಲ ಪ್ರಮುಖ ಸಾಕ್ಷಿಗಳು ದರ್ಶನ್ ವಿರುದ್ಧವಾಗಿ ಇರುವುದರಿಂದ ಕೇಸ್ನಲ್ಲಿ ದರ್ಶನ್ ಎ1 ಆಗಲಿದ್ದಾರೆ. A2ನಿಂದ A1 ಮಾಡಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ.
ಕೊಲೆ ಕೇಸ್ನಲ್ಲಿ ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಲಾಗಿದ್ದು, ಇದರಲ್ಲಿ ರೇಣುಕಾ ಸ್ವಾಮಿಯ 4 ಫೋಟೋಗಳು ಲಭ್ಯವಾಗಿವೆ. ಸಾಯುವುದಕ್ಕೂ ಮುನ್ನ ಆತ ಕೈ ಮುಗಿದು ಬೇಡಿಕೊಳ್ಳುತ್ತಿರೋ ಫೋಟೋ ಇದಾಗಿದೆ. ಆರೋಪಿಗಳಾದ ಪ್ರದೋಶ್ ಮತ್ತು ಇನ್ನೋರ್ವನ ಮೊಬೈಲ್ನಿಂದ ಈ ಫೋಟೋ ರಿಟ್ರೀವ್ ಆಗಿದ್ದು, ಹಲವು ಬಗೆಯ ಸಾಕ್ಷಿಗಳನ್ನು ಕಲೆ ಹಾಕಲಾಗಿದೆ. ಇನ್ನು ದರ್ಶನ್ ಎ1 ಆದಲ್ಲಿ ಶಿಕ್ಷೆ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.
ಇದನ್ನೂ ಓದಿ : ಉಡುಪಿ : ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವಿದ್ಯಾರ್ಥಿ ದಾರುಣ ಸಾವು..!