ಮಂಡ್ಯ : ಒಂಟಿ ಮನೆಗೆ ನುಗ್ಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಜಯಂತಿ ನಗರದ ಸಿಪಿಎಡ್ ಕಾಲೇಜ್ ಬಳಿ ನಡೆದಿದೆ. ಚಡ್ಡಿಗ್ಯಾಂಗ್ ಮಾದರಿಯಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಲೆ ಮಾಡಿದ್ದಾರೆ.
ರಮೇಶ್ ಎಂಬುವವರನ್ನು ಹತ್ಯೆ ಮಾಡಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಹಲ್ಲೆಯಿಂದ ಎಚ್ಚರಗೊಂಡ ಮಹಿಳೆ ದುಷ್ಕರ್ಮಿಗಳ ಜೊತೆ ದಿಟ್ಟ ಹೋರಾಟ ಮಾಡಿದ್ದಾಳೆ. ಯಶೋಧ ಚಾಲಕಿತನದಿಂದ ಓರ್ವ ದುಷ್ಕರ್ಮಿ ಲಾಕ್ ಆಗಿದ್ದು, ಐವರು ಕಳ್ಳರು ಪರಾರಿಯಾಗಿದ್ದಾರೆ.
ಒಂಟಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಯಶೋಧ ಮೇಲೆ ಹಲ್ಲೆ ನಡೆಸಿದ್ದರು. ಆಗ ಕುಸಿದು ಬಿದ್ದಂತೆ ನಾಟಕ ಆಡಿ ಯಶೋಧ ಕೊಡಲಿಯಿಂದ ದುಷ್ಕರ್ಮಿಗಳ ಮೇಲೆ ಅಟ್ಯಾಕ್ ಮಾಡಿ, ತಕ್ಷಣವೇ ಹೊರಗೆ ಬಂದು ಸಹಾಯಕ್ಕಾಗಿ ಕೂಗಿದ್ದಾಳೆ. ಸ್ಥಳಕ್ಕೆ ಪಾಂಡವಪುರ ಪೊಲೀಸರ ಭೇಟಿ ನೀಡಿ ದುಷ್ಕರ್ಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸುಳ್ಳನ್ನ ಸತ್ಯ ಹೇಗೆ ಮಾಡಬಹುದು ಅಂತಾ ಬಿಜೆಪಿಯವರಿಂದ ಕಲಿಬೇಕು – ಪ್ರಿಯಾಂಕ್ ಖರ್ಗೆ..!