ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಸಾಕಷ್ಟು ವಿವಾದ ಹಾಗೂ ಸ್ಪರ್ಧಿಗಳ ನಡುವಿನ ಜಗಳದಿಂದಲೇ ಹೆಚ್ಚು ಸುದ್ದಿಯಾಗಿದೆ. ಈಗಾಗಲೇ ಕಾರ್ಯಕ್ರಮ ಸಾಕಷ್ಟು ಜನಮನ್ನಣೆ ಪಡೆದಿದ್ದು, ಶನಿವಾರದ ಸಂಚಿಕೆಯಲ್ಲಿ ಖ್ಯಾತ ನಟ, ನಿರ್ದೇಶಕ ಯೋಗರಾಜ್ ಭಟ್ ಅವರ ಆಗಮಿಸಿ ಸ್ಪರ್ಧಿಗಳ ಜೊತೆ ಸಮಯ ಕಳೆದಿದ್ದರು. ಇಂದಿನ ಸಂಚಿಕೆಯಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಇದೀಗ ಕಲರ್ಸ್ ಕನ್ನಡವೊಂದು ಪ್ರೋಮೋವೊಂದನ್ನು ರಿಲೀಸ್ ಮಾಡಿದೆ. ಇದರಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸೃಜನ್ ಲೋಕೇಶ್ ಅವರು ಮಾನಸ ಯಾವ ಥರ ಮಾತನಾಡಬೇಕು ಎಂದು ಹನುಮಂತ್ ಬಳಿ ಹೇಳಿದ್ದಾರೆ.
ಇದಕ್ಕೆ ಉತ್ತರ ನೀಡಿದ ಹನುಮಂತು, ಅರ್ಧಂಬರ್ದ ತಿಳಿದುಕೊಂಡು ಮಾತನಾಡುವುದು ಸರಿಯಲ್ಲ. ವಿಚಾರವನ್ನು ತಿಳಿದುಕೊಂಡು ಮಾತನಾಡಬೇಕು.ಮನೆಯೊಳಗೆ ಅವರ ಮಾತು ಕೇಳಿ ಬೇರೆ ಅವರಿಗೆ ತುಂಬ ಬೇಜಾರ್ ಆಗುತ್ತೆ. ಗಂಡು ಮಕ್ಕಳ ಮೈ ಮೇಲೆ ಏರಿ ಏರಿ ಹೋಗ್ತಾರೆ. ಅಂದರೆ ಹೊಡಿಲಿಕ್ಕೆ ಹೋಗೋ ತರ ಮಾಡ್ತಾರೆ..ಮುಖದಲ್ಲಿ ಮುಖ ಇಟ್ಟು ಮಾತಾಡ್ತಾರೆ. ಸ್ವಲ್ಪ ಮೃದಯವಾಗಿ ಮಾತನಾಡಬೇಕು. ನೋಡಣ್ಣ..ಹಿಂಗಣ್ಣ ಅಂತ ತಮ್ಮದೇ ಶೈಲಿಯಲ್ಲಿ ಹೇಳಿ ತೋರಿಸಿದ್ದಾರೆ.
ಹನುಮಂತ ಅವರು ಮಾನಸಾಗೆ ಕೊಟ್ಟಿರುವ ಟಿಪ್ಸ್‌ಗೆ ಮನೆಯವರೆಲ್ಲರೂ ಚಪ್ಪಾಳೆ ತಟ್ಟಿದ್ದಾರೆ. ಹನುಮಂತ ಹೇಳಿದ್ದು ನೂರಕ್ಕೆ ನೂರು ಸತ್ಯ. ಒಂದೇ ವಾರಕ್ಕೆ ಹನುಮಂತ ಎಷ್ಟು ಅರ್ಥ ಮಾಡಿಕೊಂಡಿದ್ದಾನೆ. ಮಾನಸ ತುಕಾಲಿನ ಮೊದಲು ಮನೆಯಿಂದ ಹೊರಗೆ ಹಾಕಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ಮಾಧುರಿ ದೀಕ್ಷಿತ್ ಜೊತೆ ಡ್ಯಾನ್ಸ್ ಮಾಡುವಾಗ ಜಾರಿಬಿದ್ದ ನಟಿ ವಿದ್ಯಾ ಬಾಲನ್ – ವಿಡಿಯೋ ವೈರಲ್..!