Download Our App

Follow us

Home » ಮೆಟ್ರೋ » ನೆಲಮಂಗಲ : ಮಣಪ್ಪುರಂ ಗೋಲ್ಡ್ ಲೋನ್ ಬ್ರಾಂಚ್​ಗೆ ರಾತ್ರೋರಾತ್ರಿ ಬೀಗ – ಗ್ರಾಹಕರು ಕಂಗಾಲು..!

ನೆಲಮಂಗಲ : ಮಣಪ್ಪುರಂ ಗೋಲ್ಡ್ ಲೋನ್ ಬ್ರಾಂಚ್​ಗೆ ರಾತ್ರೋರಾತ್ರಿ ಬೀಗ – ಗ್ರಾಹಕರು ಕಂಗಾಲು..!

ಬೆಂಗಳೂರು : ನೆಲಮಂಗಲ ಬಳಿಯ ಮಾದನಾಯಕನಹಳ್ಳಿಯ ಮಣಪ್ಪುರಂ ಗೋಲ್ಡ್ ಲೋನ್ ಬ್ರಾಂಚ್​ಗೆ ರಾತ್ರೋರಾತ್ರಿ ಬೀಗ ಹಾಕಿದ ಹಿನ್ನೆಲೆ ಗ್ರಾಹಕರು ಕಂಗಾಲಾಗಿದ್ದಾರೆ.

ಲಕ್ಷ್ಮಿಪುರ ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಬ್ರಾಂಚ್ ಮುಂದೆ ಬಂದು ನೂರಾರು ಗ್ರಾಹಕರು ನಿರಾಸೆಯಲ್ಲಿ ಹಿಂದೆ ಹೋಗುತ್ತಿದ್ದಾರೆ. ಗ್ರಾಹಕರು ಆಭರಣಗಳನ್ನ ಅಡವಿಟ್ಟು ಬಿಡಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ ಒಂದು ವಾರದಿಂದ ಬ್ರಾಂಚ್​ಗೆ ಬೀಗ ಹಾಕಲಾಗಿದೆ ಎಂದು ಗ್ರಾಹಕರ ಆತಂಕ ವ್ಯಕ್ತಪಡಿಸಿದ್ದಾರೆ.

ಕೊಟ್ಟ ವಡವೆ, ಹಣವಿಲ್ಲದೆ, ಹಾಗೂ ಯಾವುದೇ ಮಾಹಿತಿ ಕೂಡ ಇಲ್ಲದೆ ಗ್ರಾಹಕರು ಪರದಾಟ ನಡೆಸುವಂತಾಗಿದೆ. ಹೆಡ್ ಆಫೀಸ್ ಸಂಪರ್ಕ ಮಾಡುವಂತೆ ಸೂಚನೆ ಮಾಡಿ ಯಾವುದೇ ಮಾಹಿತಿ ಇಲ್ಲದೆ ರಾತ್ರೋರಾತ್ರಿ ಮಣಪ್ಪುರಂ ಗೋಲ್ಡ್ ಲೋನ್ ಬ್ರಾಂಚ್​ಗೆ ಬೀಗ ಹಾಕಿ ಬಂದ್ ಮಾಡಲಾಗಿದೆ.

ಇದನ್ನೂ ಓದಿ : ಡಿಸಿಎಂ ಡಿ.ಕೆ.ಶಿವಕುಮಾರ್​​​ಗೆ ಬಿಗ್ ರಿಲೀಫ್ – ED ಕೇಸ್​ ವಜಾಗೊಳಿಸಿದ ಸುಪ್ರೀಂಕೋರ್ಟ್..

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here