ಬೆಂಗಳೂರು : ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರೋ ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಕ್ಷಣ ಕ್ಷಣಕ್ಕೂ ರೋಚಕ ತಿರುವು ಸಿಗುತ್ತಿದೆ. ಫ್ರಿಡ್ಜ್‌ನಲ್ಲಿ ಮಹಾಲಕ್ಷ್ಮಿಯ ದೇಹವನ್ನ 50ಕ್ಕೂ ಹೆಚ್ಚು ಪೀಸ್ ಮಾಡಿ ಇಟ್ಟಿದ್ದ ಹಂತಕನಿಗಾಗಗಿ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರು ಆತನ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ್ದು, ಕೊಲೆ ಪ್ರಕರಣ ಬೆಳಕಿಗೆ ಬಂದು ಎರಡು ದಿನದಲ್ಲಿ ಹಂತಕನ ಮಾಹಿತಿ ಖಾಕಿಗೆ ಸಿಕ್ಕಿದೆ. ಆದರೆ ಆತ ಯಾರು? ಎಲ್ಲಿಯವನು? ಯಾಕಾಗಿ ಕೊಲೆ ಮಾಡಿದ್ದ ಅನ್ನೋದು ಮಾತ್ರ ಇನ್ನೂ ನಿಗೂಢವಾಗಿದೆ.
ಅನುಮಾನಸ್ಪದ ವ್ಯಕ್ತಿಗಳನ್ನ ಖಾಕಿ ಪಡೆ ಒಬ್ಬಬ್ಬರಾಗಿ ವಿಚಾರಣೆ ಮಾಡ್ತಿದ್ದು, ಸಿಕ್ಕಿರೋ ಸಾಕ್ಷಿಗಳನ್ನ ಆಧರಿಸಿ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸ್ತಿದ್ದಾರೆ. ಇನ್ನು 50 ಪೀಸ್ ಆದ ಮಹಾಲಕ್ಷ್ಮಿಯ ಕಹಾನಿ ಕೂಡ ರೋಚಕವಾಗಿದೆ. ಮಹಾಲಕ್ಷ್ಮಿಗೆ ಮೂವರ ಜೊತೆಗೆ ಸಲುಗೆ ಇತ್ತು. ಅಶ್ರಫ್ ಸೇರಿ ಇನ್ನಿಬ್ಬರ ಜೊತೆಯೂ ಮಹಾಲಕ್ಷ್ಮಿ ಓಡಾಡುತ್ತಿದ್ದಳು ಎಂಬ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಅದರಲ್ಲಿ ಮಹಾಲಕ್ಷ್ಮಿ ಒಡಿಶಾ ಮೂಲದವನ ಜೊತೆ ಕ್ಲೋಸ್ ಆಗಿದ್ದಳು ಎನ್ನಲಾಗಿದೆ.
ಇನ್ನು ಅಶ್ರಫ್ ಎಂಬಾತನ ಮೇಲೆ ಮಹಾಲಕ್ಷ್ಮಿ ಪತಿ ಹೇಮಂತ್ ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಈ ಆರೋಪಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಕೊಲೆಯಲ್ಲಿ ಈತನ ಪಾತ್ರ ಇಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಆತನಿಗೆ ಬೆಂಗಳೂರಿನಲ್ಲೇ ಇರುವಂತೆ ಹೇಳಿ ಪೊಲೀಸರು ಕಳಿಸಿದ್ದಾರೆ. ಪೊಲೀಸರಿಗೆ ಮನೆಯಲ್ಲಿ ಮಹಾಲಕ್ಷ್ಮಿ ಮೊಬೈಲ್ ಸಿಕ್ಕಿದ್ದು, ಪೊಲೀಸರು ಈ ಮೊಬೈಲ್ನಲ್ಲಿ ಇರೋ ಸಾಕ್ಷಿಗಳನ್ನು ಪರಿಶೀಲನೆ ನಡೆಸ್ತಿದ್ದಾರೆ.
ಮನೆಯೊಳಗೆ ರಕ್ತದ ಗುರುತಿಲ್ಲ.. ಹಂತಕನ ಆಟವೇ ರೋಚಕ : ಮಹಾಲಕ್ಷ್ಮಿ ದೇಹವನ್ನ ತುಂಡರಿಸಿದ್ದ ಮನೆಯಲ್ಲಿ ನಾನಾ ಅನುಮಾನಗಳು ಹುಟ್ಟಿಕೊಳ್ಳುತ್ತಲೇ ಇವೆ. ಹೊರಗೆ ಕೊಲೆ ಮಾಡಿ ಮನೆಗೆ ಮೃತದೇಹವನ್ನು ಪೀಸ್ ಮಾಡಿ ತಂದಿರೋ ಶಂಕೆ ಕೂಡ ವ್ಯಕ್ತವಾಗಿದೆ. ಹೌದು, ಕೊಲೆ ನಡೆದ ಸ್ಥಳದಲ್ಲಿ FSL ಟೀಂ ಇಂಚಿಂಚೂ ಶೋಧ ನಡೆಸಿದೆ. ಆದರೆ ಫ್ರಿಡ್ಜ್ ನಿಂದ ತೊಟ್ಟಿಕ್ಕಿರೋ ರಕ್ತ ಬಿಟ್ರೆ ಮನೆಯ ಟಾಯ್ಲೆಟ್, ಕಿಚನ್, ಬಾತ್ ರೂಂ ಎಲ್ಲೂ ರಕ್ತದ ಕಲೆಗಳಿಲ್ಲ, ಮನೆಯ ಗೋಡೆಗಳ ಮೇಲೂ ರಕ್ತದ ಕಲೆಗಳು ಕಂಡುಬಂದಿಲ್ಲ. ಲುಮಿನಲ್ ಟೆಸ್ಟ್ ಮಾಡಿದ್ರು ಮನೆಯ ಫ್ಲೋರ್ ಗಳಲ್ಲಿ ರಕ್ತದ ಗುರುತು ಪತ್ತೆಯಾಗಿಲ್ಲ. ಹಾಗಾಗಿ ಬೇರೆಡೆ ಕೊಲೆ ಮಾಡಿ ಮೃತದೇಹವನ್ನು ಕತ್ತರಿಸಿ ತಂದು ಫ್ರಿಡ್ಜ್‌ನಲ್ಲಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮನೆಯ ಸುತ್ತಮುತ್ತ ಒಂದೇ ಒಂದು ಸಿಸಿ ಟಿವಿ ಕ್ಯಾಮರಾಗಳಿಲ್ಲ. ಸೆಪ್ಟೆಂಬರ್ 2ರಂದು ಮಹಾಲಕ್ಷ್ಮಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸುಮಾರು 20 ದಿನದ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದೆ.
ಒಡಿಶಾ ಮೂಲದ ವ್ಯಕ್ತಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಆರೋಪಿ ಪಶ್ಚಿಮ ಬಂಗಾಳದಲ್ಲಿರುವ ಮಾಹಿತಿ ಮೇಲೆ ಶೋಧ ನಡೆಸಲಾಗ್ತಿದೆ. ದೇಹವನ್ನು ಪೀಸ್ ಮಾಡಿದ್ದ ನಂತರ ತಮ್ಮನಿಗೆ ಆರೋಪಿ ಫೋನ್ ಮಾಡಿದ್ದ ಎನ್ನುವ ಸ್ಪೋಟಕ ಅಂಶ ಬಯಲಾಗಿದ್ದು, ಹಾಗಾಗಿ ಬೆಂಗಳೂರಿನಲ್ಲೇ ಇದ್ದ ಸೋದರನನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಆಪರೇಷನ್ ರಸ್ತೆ ಗುಂಡಿ – ಟಾರ್ಗೆಟ್ ಕೊಟ್ಟಿದ್ದ ಡಿಸಿಎಂ ಡಿಕೆಶಿಯಿಂದ ಸ್ಪಾಟ್ ವಿಸಿಟ್..!