Download Our App

Follow us

Home » ಅಪರಾಧ » ಬೆಂಗಳೂರಲ್ಲಿ 28 ವರ್ಷದ ಯುವಕನ ಜೊತೆ ಲವ್ವಿ ಡವ್ವಿ ಶುರುಮಾಡಿ ಬ*ಲಿಯಾದ 48ರ ಆಂಟಿ : ಕೊ*ಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್..!

ಬೆಂಗಳೂರಲ್ಲಿ 28 ವರ್ಷದ ಯುವಕನ ಜೊತೆ ಲವ್ವಿ ಡವ್ವಿ ಶುರುಮಾಡಿ ಬ*ಲಿಯಾದ 48ರ ಆಂಟಿ : ಕೊ*ಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್..!

ಬೆಂಗಳೂರು : 28 ವರ್ಷದ ಯುವಕನ ಜೊತೆ ಲವ್ವಿ ಡವ್ವಿ ಶುರುಮಾಡಿ 48ರ ಆಂಟಿ ಕೊಲೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏ.19ರಂದು ಮಹಿಳೆ ಶೋಭಾ ಕೊಲೆ ನಡೆದಿದ್ದು, ಅನುಮಾನಸ್ಪದವಾಗಿದ್ದ ಮಹಿಳೆ ಕೊಲೆ ಪ್ರಕರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಈ ಕೊಲೆ ಪ್ರಕರಣದಲ್ಲಿ ಆರೋಪಿ ನವೀನ್ ಎಂಬಾತನನ್ನ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು  ಬಂಧಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ. ನವೀನ್ ಹಾಗೂ ಕೊಲೆಯಾದ ಆಂಟಿಗೆ ಅಕ್ರಮ ಸಂಬಂಧವಿತ್ತು, ಇವರಿಬ್ಬರು ಇನ್ಸ್ಟಾಗ್ರಾಮ್​​ನಲ್ಲಿ ಪರಿಚಯವಾಗಿ ಚಾಟಿಂಗ್ ಮೂಲಕ ಫುಲ್ ಕ್ಲೋಸ್ ಆಗಿದ್ರು. ನಂತರ ಆಂಟಿ ಶೋಭಾ ನವೀನ್​​ನನ್ನ ಪದೇ ಪದೇ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಬಳಿಕ ಇಬ್ಬರ ನಡುವೆ ವೈಮನಸ್ಸು ಹೆಚ್ಚಾಗಿ ಜಗಳ ಶುರುವಾಗಿತ್ತು. ಈ ನಡುವೆ ಆರೋಪಿ ನವೀನ್ ಫೋಟೊ ಹಾಗೂ ವಿಡಿಯೋ ಇಟ್ಕೊಂಡು ಶೋಭಾ ಬ್ಲಾಕ್ ಮೇಲ್ ಮಾಡುತ್ತಿದ್ದಳು.

ಇದ್ರಿಂದ ನವೀನ್ ಕೋಪಗೊಂಡು ಆಂಟಿ ಶೋಭಾ ಕೊಲೆಗೆ ಸ್ಕೆಚ್ ಹಾಕಿದ್ದ. ಪೊಲೀಸರು ನವೀನ್​​ನ ಮೊಬೈಲ್ ಸಿಡಿಆರ್, ಸಿಸಿಟಿವಿ ಪರಿಶೀಲನೆ ಮಾಡಿದ್ದು, ವಿಚಾರಣೆ ವೇಳೆ ಆರೋಪಿ ಹೇಳಿಕೆ ಕೇಳಿ ಕೊಡಿಗೆಹಳ್ಳಿ ಪೊಲೀಸರು ಶಾಕ್ ಆಗಿದ್ದಾರೆ. ಪದೇ ಪದೇ ಸೆಕ್ಸ್ ಗಾಗಿ ಆಂಟಿ ಕಾಟ ಕೊಡ್ತಿದ್ದಳಂತೆ. ಅಷ್ಟೆ ಅಲ್ಲದೆ ಆಕೆಗೆ ಬೇರೆಯವರ ಜೊತೆಗೂ ಅಕ್ರಮ ಸಂಬಂಧ ಇತ್ತಂತೆ. ನವೀನ್​​ಗೆ ಮದುವೆ ಆಗದಂತೆ ಶೋಭಾ ಆಂಟಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳಂತೆ. ಅದಕ್ಕಾಗಿ ಕೊಲೆ ಮಾಡಿದ್ದಾಗಿ ಆರೋಪಿ ನವೀನ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ : ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ್ದ ಆರೋಪಿಗಳಿಗೆ ಇಂಥಾ ಸ್ವಾಗತನಾ..?

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here