Download Our App

Follow us

Home » ಅಪರಾಧ » ವಿಜಯಪುರ : ಲವ್​ ಮಾಡಿದ್ದಕ್ಕೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಆರೋಪ – ಕೇಸ್ ದಾಖಲು..!

ವಿಜಯಪುರ : ಲವ್​ ಮಾಡಿದ್ದಕ್ಕೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಆರೋಪ – ಕೇಸ್ ದಾಖಲು..!

ವಿಜಯಪುರ : ಲವ್​ ಮಾಡಿದ್ದಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಢವಳಗಿ ಗ್ರಾಮದ ರಾಹುಲ್​ ಬಿರಾದಾರ ಸ್ಥಿತಿ ಗಂಭೀರವಾಗಿದ್ದು, ಮುದ್ದೆಬಿಹಾಳದ ಬಿಇ ವಿದ್ಯಾರ್ಥಿನಿ ಪೋಷಕರ ವಿರುದ್ಧ ಆರೋಪ ಕೇಳಿಬಂದಿದೆ. ವಿಜಯಪುರದ ಮುದ್ದೇಬಿಹಾಳ ಠಾಣೆಯಲ್ಲಿ ಈ ಬಗ್ಗೆ ಕೇಸ್​ ದಾಖಲಾಗಿದೆ.

ರಾಹುಲ್​​ನನ್ನು ಮನೆಗೆ ಕರೆಸಿ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಆರೋಪ ವ್ಯಕ್ತವಾಗಿದೆ. ಎರಡು ವರ್ಷದ ಹಿಂದೆ ಯುವತಿ ಜೊತೆ ಪ್ರೇಮ ಮುರಿದಿತ್ತು, ನಂತರ ಎರಡೂ ಮನೆಯವರು ರಾಜಿ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಯುವತಿ ಫೋಟೋಗಳು ರಾಹುಲ್​ ಬಳಿಯಿತ್ತು, ಮದ್ವೆ ಆಗಲು ಒಪ್ಪದಿದ್ರೆ ಫೋಟೋ ವೈರಲ್​ ಮಾಡೋದಾಗಿ ರಾಹಲ್ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಮೇ 26ರಂದು ರಾಹುಲ್​​ನನ್ನು ಪೋಷಕರು ಯುವತಿ ಮನೆಗೆ ​​ಕರೆಸಿದ್ದರು. ಈ ವೇಳೆ ರಾಡ್​ನಿಂದ ಹಲ್ಲೆ ಮಾಡಿ, ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ರಾಹುಲ್​ ತಂದೆ ರಾಮನಗೌಡ ಬಿರಾದಾರ್​ ಗಂಭೀರ ಆರೋಪ ಮಾಡಿದ್ದಾರೆ.

ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ರಾಹುಲ್​ಗೆ ಟ್ರೀಟ್​ಮೆಂಟ್​ ನಡೆಯುತ್ತಿದ್ದು, ರಾಹುಲ್​​ಗೆ ಶೇ.70ರಷ್ಟು ಸುಟ್ಟಗಾಯಗಳಾಗಿದೆ. ಯುವತಿಯ ಪೋಷಕರು ಕೊಲೆ ಯತ್ನವನ್ನು ನಿರಾಕರಿಸಿದ್ದಾರೆ. ಆತನೇ ಬೆಂಕಿ ಹಚ್ಕೊಂಡು ಬೆದರಿಸಲು ಪ್ರಯತ್ನಿಸಿದ್ದ, ಬಿಡಿಸಲು ಹೋದ ನಮಗೂ ಗಾಯವಾಗಿದೆ ಎಂದು ಯುವತಿ ತಂದೆ ಹೇಳಿಕೆ ನೀಡಿದ್ದಾರೆ. ಕೊಲೆ ಯತ್ನದ ಕೇಸ್​ ದಾಖಲಿಸಿ ಮುದ್ದೆಬಿಹಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಭವಾನಿ ರೇವಣ್ಣ ಬೇಲ್​​​​​ ಅರ್ಜಿ ಭವಿಷ್ಯ ಇಂದೇ ನಿರ್ಧಾರ..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here