Download Our App

Follow us

Home » ರಾಜ್ಯ » ಲೋಕಸಭೆ ಚುನಾವಣೆ : ಇಂದು 4ನೇ ಹಂತ, 10 ರಾಜ್ಯ, 96 ಕ್ಷೇತ್ರಗಳಲ್ಲಿ ವೋಟಿಂಗ್..!

ಲೋಕಸಭೆ ಚುನಾವಣೆ : ಇಂದು 4ನೇ ಹಂತ, 10 ರಾಜ್ಯ, 96 ಕ್ಷೇತ್ರಗಳಲ್ಲಿ ವೋಟಿಂಗ್..!

ಕೇಂದ್ರ ಚುನಾವಣಾ ಆಯೋಗದ ವೇಳಾಪಟ್ಟಿಯ ಪ್ರಕಾರ 7 ಹಂತದ ಲೋಕಸಭಾ ಚುನಾವಣೆಯ ಪೈಕಿ 4ನೇ ಸುತ್ತಿನ ಮತದಾನ ಇಂದು (ಮೇ 13) ನಡೆಯಲಿದೆ. ಈಗಾಗಲೇ 4ನೇ ಹಂತದ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಇಂದು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನಕ್ಕೆ ಅವಕಾಶ ಇರಲಿದೆ.

ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಶಾಂತಿಯುತವಾಗಿ ಸುಗಮ ಮತದಾನಕ್ಕೆ ಎಲ್ಲ ಕ್ರಮಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ. ಇಂದು ಚುನಾವಣೆ ನಡೆಯುವ 96 ಸ್ಥಾನಗಳಲ್ಲಿ ಒಟ್ಟು 1717 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇಂದು ಆಂಧ್ರಪ್ರದೇಶ (25), ತೆಲಂಗಾಣ (17)ದ ಎಲ್ಲ ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಉಳಿದಂತೆ ಉತ್ತರ ಪ್ರದೇಶ (13), ಮಹಾರಾಷ್ಟ್ರ (11), ಪಶ್ಚಿಮ ಬಂಗಾಳ (8) ಮಧ್ಯಪ್ರದೇಶ (8), ಬಿಹಾರ (5), ಜಾರ್ಖಂಡ್ (4) ಒಡಿಶಾ (4) ಜಮ್ಮು ಮತ್ತು ಕಾಶ್ಮೀರ (1) ಸ್ಥಾನಕ್ಕೆ ಮತದಾನ ನಡೆಯಲಿದೆ.

ದೇಶದಲ್ಲಿ ಈಗಾಗಲೇ 3 ಹಂತದ ಲೋಕಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಏ.19 ರಂದು ಮೊದಲ ಹಂತ, ಏ.26 2ನೇ ಹಂತ, ಮೇ7 3ನೇ ಹಂತದ ಮತದಾನ ಮುಗಿದಿದೆ. ಇಂದು 4ನೇ ಹಂತದ ಮತದಾನ ನಡೆಯಲಿದ್ದು, ಮೇ 20 ರಂದು 5ನೇ, ಮೇ 25 ರಂದು 6ನೇ ಮತ್ತು ಜೂ.1 ರಂದು 7 ಹಾಗೂ ಅಂತಿಮ ಹಂತದ ಚುನಾವಣೆಗಳು ನಡೆಯಲಿವೆ. ಜೂ. 4 ರಂದು ಎಲ್ಲ ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

4ನೇ ಹಂತದ ಚುನಾವಣೆಯಲ್ಲಿ ಘಟಾನುಘಟಿ ನಾಯಕರುಗಳು ಕಣದಲ್ಲಿದ್ದಾರೆ :

  • ಅಖಿಲೇಶ್ ಯಾದವ್ – ಉತ್ತರ ಪ್ರದೇಶದ ಕನೌಜ್ ಕ್ಷೇತ್ರ
  • ಮಹುವಾ ಮೊಯಿತ್ರಾ – ಪಶ್ಚಿಮ ಬಂಗಾಳದ ಕೃಷ್ಣನಗರ
  • ಅಧೀರ್ ರಂಜನ್ ಚೌಧರಿ – ಬಹರಂಪುರ್, ಪಶ್ಚಿಮ ಬಂಗಾಳ
  • ಗಿರಿರಾಜ್ ಸಿಂಗ್ – ಬಿಹಾರದ ಬೇಗುಸರಾಯ್
  • ವೈಎಸ್ ಶರ್ಮಿಳಾ – ಆಂಧ್ರಪ್ರದೇಶದ ಕಡಪ
  • ಅರ್ಜುನ್ ಮುಂಡಾ – ಜಾರ್ಖಂಡ್‌ನ ಖುಂಟಿ ಕ್ಷೇತ್ರ
  • ಶತ್ರುಘ್ನ ಸಿನ್ಹಾ – ಪಶ್ಚಿಮ ಬಂಗಾಳದ ಅಸನ್ಸೋಲ್
  • ಅಸಾದುದ್ದೀನ್ ಓವೈಸಿ – ತೆಲಂಗಾಣದ ಹೈದರಾಬಾದ್

ಇದನ್ನೂ ಓದಿ : ಪ್ರಜ್ವಲ್ ಪೆನ್​ಡ್ರೈವ್ ಕೇಸ್ ಬಗ್ಗೆ ಬಹಿರಂಗ ಹೇಳಿಕೆ ಕೊಟ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ : ಡಾ. ಜಿ ಪರಮೇಶ್ವರ್..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here