ಕೊಪ್ಪಳ : ಕೊಪ್ಪಳ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. NGO ಪ್ರಮಾಣ ಪತ್ರ ನೀಡಲು ದಸ್ತಗಿರಿ ಅಲಿ ಎಂಬಾತ 2 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಭೀಮನಗೌಡ ಎಂಬವರಿಂದ ದಸ್ತಗಿರಿ ಅಲಿ ಲಂಚ ಸ್ವೀಕರಿಸುವಾಗ ಕೊಪ್ಪಳ ಲೋಕಾಯುಕ್ತ ಪಿಐ ನಾಗರತ್ನ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಗಾಬರಿಗೊಂಡ ದಸ್ತಗಿರಿ ಅಲಿ ಅಧಿಕಾರಿಗಳ ಮುಂದೆ 2 ಸಾವಿರ ರೂ. ನೋಟನ್ನು ನುಂಗಿದ್ದಾರೆ.
ನಂತರ ಲೋಕಾಯುಕ್ತ ಸಿಬ್ಬಂದಿ ಹರಸಾಹಸ ಪಟ್ಟು ನೋಟು ಹೊರತೆಗೆಸಿದ್ದಾರೆ. ರಾಯಚೂರು ಲೋಕಾ ಎಸ್ಪಿ ಶಶಿಧರ್ ಮಾರ್ಗದರ್ಶನದಲ್ಲಿ ರೇಡ್ ಮಾಡಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ಒಂಟಿ ಮನೆಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆ – ಓರ್ವ ದುಷ್ಕರ್ಮಿ ಪೊಲೀಸರ ವಶಕ್ಕೆ..!
Post Views: 65