Download Our App

Follow us

Home » ರಾಜ್ಯ » 35 ಸ್ಥಳಗಳಲ್ಲಿ ನಡೆದಿದ್ದ ಲೋಕಾಯುಕ್ತ ದಾಳಿ ಮುಕ್ತಾಯ : 6 ಅಧಿಕಾರಿಗಳ ಕೋಟಿ ಕೋಟಿ ಆಸ್ತಿ-ಪಾಸ್ತಿ ಪತ್ತೆ..!

35 ಸ್ಥಳಗಳಲ್ಲಿ ನಡೆದಿದ್ದ ಲೋಕಾಯುಕ್ತ ದಾಳಿ ಮುಕ್ತಾಯ : 6 ಅಧಿಕಾರಿಗಳ ಕೋಟಿ ಕೋಟಿ ಆಸ್ತಿ-ಪಾಸ್ತಿ ಪತ್ತೆ..!

ಬೆಂಗಳೂರು : ಆದಾಯ ಮೀರಿದ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ಆರು ಅಧಿಕಾರಿಗಳ ಮನೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ಬೆಳಗ್ಗೆಯೇ ದಾಳಿ ನಡೆಸಿತ್ತು.

ಇದೀಗ 35 ಸ್ಥಳಗಳಲ್ಲಿ ನಡೆದಿದ್ದ ಲೋಕಾಯುಕ್ತ ದಾಳಿ ಮುಕ್ತಾಯವಾಗಿದೆ. ದಾಳಿ ವೇಳೆ ಅಧಿಕಾರಿಗಳ ಮನೆಯಲ್ಲಿ ಕೋಟಿ ಕೋಟಿ ಆಸ್ತಿ-ಪಾಸ್ತಿ ಪತ್ತೆಯಾಗಿದೆ.

ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಎಲ್. ನಾಗರಾಜ್ ಅವರ 6.37 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಪತ್ತೆಯಾಗಿದ್ದು, ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ ಎನ್. ಸತೀಶ್ ಬಾಬು ಅವರ 4.52 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಪತ್ತೆಯಾಗಿದೆ.

ಕುಂದಾಣ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಿ.ಎಂ. ಪದ್ಮನಾಭ ಅವರ 5.98 ಕೋಟಿ ಮೌಲ್ಯದ ಸ್ಥಿರ & ಚರ ಆಸ್ತಿ ಪತ್ತೆಯಾಗಿದೆ.

ಹಾಗೆಯೇ ಕರ್ನಾಟಕ ಗ್ರಾಮೀಣ‌ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ‌ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಮುನೀರ್ ಅವರ 5.48 ಕೋಟಿ ಮೌಲ್ಯದ ಸ್ಥಿರ & ಚರ ಆಸ್ತಿ ಪತ್ತೆಯಾಗಿದೆ.

ಬಿಬಿಎಂಪಿ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಮಂಜೇಶ್ ಬಿ ಅವರ 3.18 ಕೋಟಿ ಮೌಲ್ಯದ ಸ್ಥಿರ & ಚರ ಆಸ್ತಿ ಪತ್ತೆಯಾಗಿದ್ದು,  ಬೆಂಗಳೂರು ದಕ್ಷಿಣ, ಚನ್ನೇನಹಳ್ಳಿ ಗ್ರಾ.ಪಂ ಸದಸ್ಯ ಹೆಚ್.ಎಸ್.ಸುರೇಶ್ ಅವರ 25.58 ಕೋಟಿ ಮೌಲ್ಯದ ಸ್ಥಿರ & ಚರ ಆಸ್ತಿ ಪತ್ತೆಯಾಗಿದೆ.

ಇದನ್ನೂ ಓದಿ : ದಾವಣಗೆರೆ : ಮಾಸಾಸನ ಹಣಕ್ಕಾಗಿ 4 ಕಿಲೋ ಮೀಟರ್ ತೆವಳಿಕೊಂಡು ಬಂದ ವೃದ್ಧೆ..!

Leave a Comment

DG Ad

RELATED LATEST NEWS

Top Headlines

ಅಭ್ಯರ್ಥಿ ಡಿಸೈಡ್ ಮಾಡೋದು ಬಿಜೆಪಿ ವರಿಷ್ಠರು ಮತ್ತು ನಾನು – ಯೋಗೇಶ್ವರ್​ಗೆ HDK ಟಾಂಗ್​​​..!

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ತೆರವಾಗಿರುವ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ನಡುವೆ ಚನ್ನಪಟ್ಟಣ

Live Cricket

Add Your Heading Text Here