ತುಮಕೂರು : ಭ್ರಷ್ಟ ಅಧಿಕಾರಿಗಳಿಗೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಬಿಸಿ ಮುಟ್ಟಿಸಿದೆ. ರಾಜ್ಯದ 12 ಜನ ಭ್ರಷ್ಟ ಅಧಿಕಾರಿಗಳಿಗೆ ಸೇರಿದ 54 ಕಡೆಗಳಲ್ಲಿ 100ಕ್ಕೂ ಹೆಚ್ಚು ಲೋಕಾ ಅಧಿಕಾರಿಗಳು ಮುಂಜಾನೆ ರೇಡ್ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ.
ಬೆಂಗಳೂರು ಖನಿಜಭವನದ KIADB ಅಪರ ನಿರ್ದೇಶಕ ಮುದ್ದುಕುಮಾರ್ ಮೇಲೆ ಲೋಕಾ ರೇಡ್ ಮಾಡಿದ್ದು, ಮುದ್ದುಕುಮಾರ್ ಮನೆಯಲ್ಲಿ ರಾಶಿ-ರಾಶಿ ಚಿನ್ನ ಸಿಕ್ಕಿದೆ. ಕಾಸಿನ ಸರ, ಲಕ್ಷ್ಮಿ ಜುಮ್ಕಿ, ನಕ್ಲೆಸ್, ಚಿನ್ನದ ಬಳೆಗಳು, ಮುತ್ತಿನ ಸರ, ಕಂತೆ-ಕಂತೆ ನೋಟು, ಓಲೆಗಳು ಹಾಗೂ ದುಬಾರಿ ಬೆಲೆಯ 30ಕ್ಕೂ ಹೆಚ್ಚು ವಾಚ್ಗಳು ಪತ್ತೆಯಾಗಿದೆ.
ಬೆಂಗಳೂರು, ತುಮಕೂರಿನಲ್ಲಿರುವ ಮನೆಗಳು, ಕಚೇರಿಗಳಲ್ಲಿ ಶೋಧ ನಡೆಸಿದ್ದು, ಮುದ್ದುಕುಮಾರ್ ಮನೆ, ಕಚೇರಿ ಸೇರಿದಂತೆ 7 ಕಡೆಗಳಲ್ಲಿ ಲೋಕಾ ರೇಡ್ ಮಾಡಿದೆ. ಬೆಂಗಳೂರಿನ ನಾಗರಭಾವಿಯ 2ನೇ ಹಂತದಲ್ಲಿರುವ ವಾಸದ ಮನೆ, ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕಚೇರಿ, ತುಮಕೂರು ನಗರದ ಬನಶಂಕರಿಯಲ್ಲಿರುವ ಮನೆಯಲ್ಲಿ ಶೋಧ ನಡೆಸಿದ್ದಾರೆ.
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಮನೆಯಲ್ಲೂ ಹುಡುಕಾಟ ನಡೆಸಿದ್ದು, ಚಿಕ್ಕನಾಯಕನಹಳ್ಳಿಯ ಶೆಟ್ಟಿಕೆರೆ ಹೋಬಳಿ ರಂಗನಾಥಪುರದ ಫಾರಂಹೌಸ್, ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದನ್ನೂ ಓದಿ : ಕೈಕೊಟ್ಟ ಮೈಕ್ರೋಸಾಫ್ಟ್ ವಿಂಡೋಸ್ - ಅಮೆರಿಕ, ಭಾರತ, ಆಸ್ಟ್ರೇಲಿಯಾ ಸೇರಿ ದೊಡ್ಡ ರಾಷ್ಟ್ರಗಳೇ ಶೇಕ್..!