ಮಂಗಳೂರು : ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ. ರಾಜ್ಯದ 54 ಕಡೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಯಾದಗಿರಿ, ತುಮಕೂರು, ಮಂಡ್ಯ, ಮಂಗಳೂರು ಸೇರಿ ಹಲವೆಡೆ ರೇಡ್ ನಡೆಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ಗೆ ಲೋಕಾಯುಕ್ತ ರೇಡ್ ಶಾಕ್ ಕೊಟ್ಟಿದೆ. KAS ಗ್ರೇಡ್ ಅಧಿಕಾರಿ ಆನಂದ್ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಮಿಷನರ್ ಕಚೇರಿ ಹಾಗೂ ನಿವಾಸದಲ್ಲಿ ಲೋಕಾ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು ಸೇರಿದಂತೆ ಹಲವು ಕಡೆ ಶೋಧ ನಡೆಸುತ್ತಿದ್ದು, ಆಸ್ತಿ-ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ತುಮಕೂರಿನಲ್ಲಿ KIADB ಅಪರ ನಿರ್ದೇಶಕ ಮುದ್ದುಕುಮಾರ್ ಮೇಲೆ ಲೋಕಾ ರೇಡ್..!
Post Views: 44