Download Our App

Follow us

Home » ಸಿನಿಮಾ » ರೆಡ್​ ರೋಸ್​​​ ಜೊತೆಗೆ ಲಾಂಗ್​, ಚಿಟ್ಟೆಯ ‘ಲವ್​ಲೀ’ಯಲ್ಲಿ ಸಿಂಹ ಘರ್ಜನೆ – ಇದು ಬದುಕಿನ ಕಥೆ..!

ರೆಡ್​ ರೋಸ್​​​ ಜೊತೆಗೆ ಲಾಂಗ್​, ಚಿಟ್ಟೆಯ ‘ಲವ್​ಲೀ’ಯಲ್ಲಿ ಸಿಂಹ ಘರ್ಜನೆ – ಇದು ಬದುಕಿನ ಕಥೆ..!

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಲವ್ ಲೀ. ವಸಿಷ್ಠ ಸಿಂಹ ನಟನೆಯ ಈ ಸಿನಿಮಾ ಈಗಾಗ್ಲೇ ಸ್ಯಾಂಪಲ್ಸ್‌ನಿಂದ ಸೌಂಡ್ ಮಾಡ್ತಿದೆ. ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದ್ದು, ಲವ್ ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಹೀಗಿರುವಾಗ್ಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಮಾಸ್ ಎಂಡ್​​ ಕ್ಲಾಸ್ ಎಲಿಮೆಂಟ್ಸ್‌ನಿಂದ ಸಖತ್ ಸೌಂಡ್ ಮಾಡ್ತಿದೆ.

ಕಂಚಿನ ಕಂಠದ ವಸಿಷ್ಠ ಸಿಂಹಗೆ ಈ ವರ್ಷ ತುಂಬಾನೇ ವಿಶೇಷ ಮತ್ತು ವಿಶಿಷ್ಠ. ಅದಕ್ಕೆ ಹತ್ತಾರು ಕಾರಣಗಳಿವೆ. ಆ ಪೈಕಿ ವಸಿಷ್ಠ ಸಿಂಹ ಅಭಿನಯದ ಲವ್ ಲೀ ಸಿನಿಮಾ ಈ ಜೂನ್‌ನಲ್ಲಿ ರಿಲೀಸ್​ ಆಗಲಿದೆ ಅನ್ನುವುದು ಒಂದಾದ್ರೆ, ವಸಿಷ್ಠ ಸಿಂಹ ಅಭಿನಯದ ಎರಡು ತೆಲುಗು ಸಿನಿಮಾ ಕೂಡ ಬಿಗ್​ ಸ್ಕ್ರೀನ್​ ಮೇಲೆ ಬರೋದಕ್ಕೆ ರೆಡಿಯಾಗಿದೆ ಅನ್ನೋದು ಮತ್ತೊಂದು. ಲವ್ ಲೀ ಚಿತ್ರದ ಮೇಲೆ ವಸಿಷ್ಠ ಸಿಂಹಗೆ ಅಪಾರವಾದ ನಿರೀಕ್ಷೆಗಳಿವೆ. ಯಾಕೆಂದ್ರೆ ವಸಿಷ್ಠ ಇಲ್ಲಿ ಖಳನಾಯಕ ಅಲ್ಲ ಬದಲಿಗೆ ನಾಯಕ. ಪೂರ್ತಿ ಚಿತ್ರವನ್ನ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿರುವ ವಸಿಷ್ಠಗೆ ಚಿತ್ರ ಮೂಡಿ ಬಂದ ರೀತಿ ಖುಷಿಯನ್ನ ಕೊಟ್ಟಿದೆ.

ಹಾಡುಗಳಿಗೆ ಸಿಕ್ತಿರುವ ಪ್ರತಿಕ್ರಿಯೆ ಈ ಖುಷಿಯನ್ನ ಇನ್ನಷ್ಟು ಹೆಚ್ಚಿಸಿದೆ. ಇದೆಲ್ಲದರಿಂದ ಲವ್ ಲೀ ಚಿತ್ರಕ್ಕೆ ಕರುನಾಡು ಲವ್ ಲೀ ಸ್ವಾಗತ ಕೋರುತ್ತೆ ಅನ್ನುವ ವಿಶ್ವಾಸ ಕೂಡ ಇವರಲ್ಲಿ ಹೆಚ್ಚಾಗಿದೆ. ಇದೆಲ್ಲದರ ನಡುವೆ ವಸಿಷ್ಠ ಸಿಂಹ ನಿಧಾನಕ್ಕೆ ತೆಲುಗು ಚಿತ್ರರಂಗದಲ್ಲಿ ಕೂಡ ಬ್ಯುಸಿಯಾಗ್ತಿದ್ದಾರೆ. ಒಂದಾದ ಮೇಲೊಂದು ಸಿನಿಮಾ ಮಾಡ್ತಿದ್ದಾರೆ. ಆ ಪೈಕಿ ಎರಡು ಸಿನಿಮಾಗಳು ಕೂಡ ಬಿಡುಗಡೆಗೆ ಸಿದ್ಧವಾಗಿವೆ. ಹೀಗೆ ಎಲ್ಲಾ ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ನಲ್ಲಿ ಅಬ್ಬರಿಸೋಕೆ ವಸಿಷ್ಠ ನಾನ್​ ರೆಡಿ ಅಂತಿದ್ದಾರೆ.

ಲವ್​ ಲೀ ಸಿನಿಮಾ ಸಹ ಗಾಂಧಿ ನಗರದಲ್ಲಿ ಸೌಂಡ್​ ಮಾಡೋಕೆ ಕೌಂಟ್​ಡೌನ್​ ಶುರು ಮಾಡಿದೆ. ಈಗಾಗಲೇ ಕಲರ್​ಫುಲ್​ ಸಾಂಗ್​ಗಳ ಮೂಲಕ ಸದ್ದು ಸದ್ದಿ ಮಾಡ್ತಿರೋ ಲವ್​ ಲೀ ಸಿನಿಮಾದ ಟ್ರೇಲರ್​ ರಿಲೀಸ್​ ಈವೆಂಟ್​​ ಇತ್ತಿಚೆಗೆ ಸಖತ್​ ಗ್ರ್ಯಾಂಡ್​ ಆಗಿ ನಡೆದಿದೆ.. ಇದಕ್ಕೆ ಇಡೀ ಸ್ಯಾಂಡಲ್​​ವುಡ್​ ಗಣ್ಯರು ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಂದ್ಹಾಗೆ ಲವ್​ ಲೀ ಕಲರ್​ಫುಲ್​ ಈವೆಂಟ್​ಗೆ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ, ನಟ ನವೀನ್​ ಶಂಕರ್​​​, ಸ್ಟಾರ್​ ನಿರ್ದೇಶಕ ಚೇತನ್​​, ಗುರುದೇಶ್​ ಪಾಂಡೆ, ನಟಿ ಹರಿಪ್ರಿಯಾ, ನಟಿ ಬೃಂದಾ ಆಚಾರ್ಯ ಸೇರಿದಂತೆ ಕನ್ನಡದ ಸಾಕಷ್ಟು ಕಲಾವಿದರು ಭಾಗಿಯಾಗಿ, ಈ ಈವೆಂಟ್​ನ್ನ ಕಳೆಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. ಲವ್​ ಲೀ ಸಿನಿಮಾ ಔಟ್​ ಎಂಡ್​ ಔಟ್​​​​ ರೊಮ್ಯಾಂಟಿಕ್​ ಲವ್​ ಸ್ಟೋರಿಯೊಂದಿಗೆ ರೌಡಿಸಂ ಕಥೆ ಇರುವ ಸ್ಟೋರಿಯಾಗಿದ್ದು, ವಸಿಷ್ಠಗೆ ಜೋಡಿಯಾಗಿ ಜಾರ್ಖಂಡ್​ ಮೂಲದ ಸ್ಟೆಫಿ ಪಟೇಲ್​ ನಾಯಾಕಿಯಾಗಿ ಮಿಂಚಿದ್ದಾರೆ. ಉಳಿದಂತೆ ಪ್ರಮುಖ ಪಾತ್ರದಲ್ಲಿ ಸಮೀಕ್ಷಾ, ಬೇಬಿ ವಂಶಿಕಾ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.

ಚಿತ್ರದಲ್ಲಿ ಸೋಷಿಯಲ್ ಮೆಸೇಜ್ ಕೂಡ ಇದೆ. ಮಂಗಳೂರು, ಬೆಂಗಳೂರು ಉಡುಪಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಲಂಡನ್​ನಲ್ಲಿ ಒಂದು ಸಾಂಗ್ ಶೂಟಿಂಗ್ ಮಾಡಲು ಯೋಜನೆ ಹಾಕಲಾಗಿದೆ. ರೌಡಿಸಂ, ಲವ್, ಡ್ರಾಮಾ ಹಾಗೂ ಫ್ಯಾಮಿಲಿ ಜಾನರ್​ನಲ್ಲಿ ಸಿನಿಮಾ ಸಾಗುತ್ತದೆ. ಪ್ರೀತಿ, ನಂಬಿಕೆ ಮೇಲೆ ಸಂಬಂಧಗಳು ಮುಖ್ಯ. ಅವುಗಳನ್ನು ಹೇಗೆ ಉಳಿಸುಕೊಳ್ಳಬೇಕು? ಎಂಬುದು ಕಥೆಯಲ್ಲಿ ಇದೆ. ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಮೂರು ಆ್ಯಕ್ಷನ್ ಮತ್ತು ನಾಲ್ಕು ಹಾಡುಗಳಿವೆ.

ಒಟ್ನಲ್ಲಿ ಸದ್ಯಕ್ಕೆ ವಸಿಷ್ಠ ಸಿಂಹ ಈ ವರ್ಷ ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ರಸದೌತಣ ಬಡಿಸಲು ಸಿದ್ಧರಾಗಿದ್ದಾರೆ. ಇನ್ನೂ ವ್ಯೆಯಕ್ತಿಕ ಜೀವನ ಕೂಡ ಸಂತೋಷ ಮತ್ತು ಸಂಭ್ರಮದಿಂದ ತುಂಬಿದೆ. ಚಿತ್ರರಂಗದಲ್ಲಿ ವಸಿಷ್ಠ ಅವರ ಈ ವಿಶಿಷ್ಠ ಯಾತ್ರೆ ಹೀಗೆ ಮುಂದುವರೆಯಲಿ, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಹತ್ತಾರು ಕನಸುಗಳು ಹೀಗೆ ನನಸಾಗಲಿ ಅನ್ನುವುದು ಇವರ ಅಭಿಮಾನಿಗಳ ಆಶಯ. ಹಾಗೇ ಲವ್​ ಲೀ ಸಿನಿಮಾ ಸಕ್ಸಸ್​ ಆಗಲ್ಲಿ ಅನ್ನೋದೆ ನಮ್ಮ ಹಾರೈಕೆ.

ಇದನ್ನೂ ಓದಿ : ನಾಲ್ಕನೇ ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು..!

 

 

 

 

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here