Download Our App

Follow us

Home » ರಾಜಕೀಯ » ಮುಡಾ ಹಗರಣದ ವಿರುದ್ಧ ಸಿಡಿದೆದ್ದ ಮೈತ್ರಿ ನಾಯಕರು – ಇಂದಿನಿಂದ​ ಪಾದಯಾತ್ರೆ ಆರಂಭ..!

ಮುಡಾ ಹಗರಣದ ವಿರುದ್ಧ ಸಿಡಿದೆದ್ದ ಮೈತ್ರಿ ನಾಯಕರು – ಇಂದಿನಿಂದ​ ಪಾದಯಾತ್ರೆ ಆರಂಭ..!

ಬೆಂಗಳೂರು : ಮುಡಾ ಹಗರಣದ ವಿರುದ್ಧ ಹೋರಾಟ ಮಾಡ್ತಿರುವ ರಾಜ್ಯ ಬಿಜೆಪಿ ನಾಯಕರು, ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದ ವಿರುದ್ಧ ಬೀದಿ ಹೋರಾಟಕ್ಕೆ ಕಹಳೆ ಮೊಳಗಿಸಿದ್ದಾರೆ.

ಮುಡಾ ಹಗರಣದ ವಿರುದ್ಧ ಮೈತ್ರಿ ನಾಯಕರು ಸಿಡಿದೆದ್ದಿದ್ದು, ಇಂದಿನಿಂದ ಮೈಸೂರು ಚಲೋ ಪಾದಯಾತ್ರೆ ಆರಂಭಿಸಲಿದ್ದಾರೆ. ಬಿಜೆಪಿ-ಜೆಡಿಎಸ್ ನೇತೃತ್ವದಲ್ಲಿ ಇಂದಿನಿಂದ​ ಪಾದಯಾತ್ರೆ ಆರಂಭವಾಗಿ 8 ದಿನ ನಡೆಯಲಿದೆ. ಮಾಜಿ ಸಿಎಂ BSY ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಇಂದು ಬೆಳಗ್ಗೆ 8.30ಕ್ಕೆ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.

ವಿಪಕ್ಷ ನಾಯಕ ಆರ್​.ಅಶೋಕ್​, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕುಮಾರಸ್ವಾಮಿ ನೇತೃತ್ವದಲ್ಲಿ ಕೆಂಗೇರಿಯ ಕೆಂಪಮ್ಮ ಹಾಗೂ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಶುರುವಾಗಲಿದೆ.

ಪ್ರತಿದಿನ 8-10 ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮೈತ್ರಿ ನಾಯಕರು, ಸಂಸದರು, ಶಾಸಕರು ಸೇರಿದಂತೆ ಮುಂಖಡರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಗೆ ಕೈಜೋಡಿಸಲಿದ್ದಾರೆ. ಅಂತೆಯೇ ಆಗಸ್ಟ್​ 10 ರಂದು ಮೈಸೂರಿನಲ್ಲಿ ನಡೆಯಲಿರುವ ಬೃಹತ್​ ಸಮಾವೇಶದಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಜೆಪಿ ನಡ್ಡಾ ಭಾಗಿಯಾಗುವ ಸಾಧ್ಯತೆಯಿದೆ.

ಹೀಗಿರಲಿದೆ ಪಾದಯಾತ್ರೆ :

  • ಆಗಸ್ಟ್​​ 3ಕ್ಕೆ ಕೆಂಗೇರಿಯಲ್ಲಿ ಚಾಲನೆ.. ರಾತ್ರಿ ಬಿಡದಿಯಲ್ಲಿ ವಾಸ್ತವ್ಯ
  • ಆಗಸ್ಟ್​ 4 ಭಾನುವಾರ ಬಿಡದಿಯಿಂದ ರಾಮನಗರದವರೆಗೆ ಪಾದಯಾತ್ರೆ
  • ಆಗಸ್ಟ್​ 5 ಸೋಮವಾರ ರಾಮನಗರದಿಂದ ಚನ್ನಪಟ್ಟಣಕ್ಕೆ
  • ಆಗಸ್ಟ್​ 6 ಮಂಗಳವಾರ ಚನ್ನಪಟ್ಟಣದಿಂದ ಮದ್ದೂರುವರೆಗೆ ಪಾದಯಾತ್ರೆ
  • ಆಗಸ್ಟ್​ 7 ಬುಧವಾರ ಮದ್ದೂರಿನಿಂದ ಮಂಡ್ಯದವರೆಗೆ ಕಾಲ್ನಡಿಗೆ
  • ಆಗಸ್ಟ್​ 8 ಗುರುವಾರ ಮಂಡ್ಯದಿಂದ ಶ್ರೀರಂಗಪಟ್ಟಣವರೆಗೆ
  • ಆಗಸ್ಟ್​ 9 ಶ್ರೀರಂಗಪಟ್ಟಣದಿಂದ ಮೈಸೂರಿಗೆ ಪಾದಯಾತ್ರೆ
  • ಆಗಸ್ಟ್​ 10 ರಂದು ಮೈಸೂರಿನಲ್ಲಿ ನಡೆಯಲಿದೆ ಬೃಹತ್​ ಸಮಾವೇಶ

ಇದನ್ನೂ ಓದಿ : ಹ್ಯಾಟ್ರಿಕ್‌ ಪದಕದ ಮೇಲೆ ಮನು ಭಾಕರ್ ಗುರಿ – ಇಂದು 25ಮೀ ಏರ್ ಪಿಸ್ತೂಲ್ ಫೈನಲ್, ಎಷ್ಟು ಗಂಟೆಗೆ?

Leave a Comment

DG Ad

RELATED LATEST NEWS

Top Headlines

ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ – ಅಪರಿಚಿತ ಟ್ರಕ್ ಚಾಲಕನ ವಿರುದ್ದ ಹಿಟ್ & ರನ್ ಕೇಸ್ ದಾಖಲು!

ಬೆಂಗಳೂರು : ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ನಿನ್ನೆ ಅಪಘಾತಕ್ಕೀಡಾಗಿದ್ದು, ಸದ್ಯ ಸಚಿವೆ

Live Cricket

Add Your Heading Text Here