ಬೆಂಗಳೂರು : ಮುಡಾ ಹಗರಣದ ವಿರುದ್ಧ ಹೋರಾಟ ಮಾಡ್ತಿರುವ ರಾಜ್ಯ ಬಿಜೆಪಿ ನಾಯಕರು, ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದ ವಿರುದ್ಧ ಬೀದಿ ಹೋರಾಟಕ್ಕೆ ಕಹಳೆ ಮೊಳಗಿಸಿದ್ದಾರೆ.
ಮುಡಾ ಹಗರಣದ ವಿರುದ್ಧ ಮೈತ್ರಿ ನಾಯಕರು ಸಿಡಿದೆದ್ದಿದ್ದು, ಇಂದಿನಿಂದ ಮೈಸೂರು ಚಲೋ ಪಾದಯಾತ್ರೆ ಆರಂಭಿಸಲಿದ್ದಾರೆ. ಬಿಜೆಪಿ-ಜೆಡಿಎಸ್ ನೇತೃತ್ವದಲ್ಲಿ ಇಂದಿನಿಂದ ಪಾದಯಾತ್ರೆ ಆರಂಭವಾಗಿ 8 ದಿನ ನಡೆಯಲಿದೆ. ಮಾಜಿ ಸಿಎಂ BSY ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಇಂದು ಬೆಳಗ್ಗೆ 8.30ಕ್ಕೆ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕುಮಾರಸ್ವಾಮಿ ನೇತೃತ್ವದಲ್ಲಿ ಕೆಂಗೇರಿಯ ಕೆಂಪಮ್ಮ ಹಾಗೂ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಶುರುವಾಗಲಿದೆ.
ಪ್ರತಿದಿನ 8-10 ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮೈತ್ರಿ ನಾಯಕರು, ಸಂಸದರು, ಶಾಸಕರು ಸೇರಿದಂತೆ ಮುಂಖಡರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಗೆ ಕೈಜೋಡಿಸಲಿದ್ದಾರೆ. ಅಂತೆಯೇ ಆಗಸ್ಟ್ 10 ರಂದು ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಜೆಪಿ ನಡ್ಡಾ ಭಾಗಿಯಾಗುವ ಸಾಧ್ಯತೆಯಿದೆ.
ಹೀಗಿರಲಿದೆ ಪಾದಯಾತ್ರೆ :
- ಆಗಸ್ಟ್ 3ಕ್ಕೆ ಕೆಂಗೇರಿಯಲ್ಲಿ ಚಾಲನೆ.. ರಾತ್ರಿ ಬಿಡದಿಯಲ್ಲಿ ವಾಸ್ತವ್ಯ
- ಆಗಸ್ಟ್ 4 ಭಾನುವಾರ ಬಿಡದಿಯಿಂದ ರಾಮನಗರದವರೆಗೆ ಪಾದಯಾತ್ರೆ
- ಆಗಸ್ಟ್ 5 ಸೋಮವಾರ ರಾಮನಗರದಿಂದ ಚನ್ನಪಟ್ಟಣಕ್ಕೆ
- ಆಗಸ್ಟ್ 6 ಮಂಗಳವಾರ ಚನ್ನಪಟ್ಟಣದಿಂದ ಮದ್ದೂರುವರೆಗೆ ಪಾದಯಾತ್ರೆ
- ಆಗಸ್ಟ್ 7 ಬುಧವಾರ ಮದ್ದೂರಿನಿಂದ ಮಂಡ್ಯದವರೆಗೆ ಕಾಲ್ನಡಿಗೆ
- ಆಗಸ್ಟ್ 8 ಗುರುವಾರ ಮಂಡ್ಯದಿಂದ ಶ್ರೀರಂಗಪಟ್ಟಣವರೆಗೆ
- ಆಗಸ್ಟ್ 9 ಶ್ರೀರಂಗಪಟ್ಟಣದಿಂದ ಮೈಸೂರಿಗೆ ಪಾದಯಾತ್ರೆ
- ಆಗಸ್ಟ್ 10 ರಂದು ಮೈಸೂರಿನಲ್ಲಿ ನಡೆಯಲಿದೆ ಬೃಹತ್ ಸಮಾವೇಶ
ಇದನ್ನೂ ಓದಿ : ಹ್ಯಾಟ್ರಿಕ್ ಪದಕದ ಮೇಲೆ ಮನು ಭಾಕರ್ ಗುರಿ – ಇಂದು 25ಮೀ ಏರ್ ಪಿಸ್ತೂಲ್ ಫೈನಲ್, ಎಷ್ಟು ಗಂಟೆಗೆ?