ಬೆಂಗಳೂರು : ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ಇಂದಿನಿಂದ 26ರವರೆಗೆ ನಡೆಯಲಿದೆ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ನಡೆಯುವ ಮಾತಿನ ಸಮರಕ್ಕೆ ಇಂದಿನಿಂದ ವಿಧಾನಮಂಡಲ ಅಧಿವೇಶನ ವೇದಿಕೆಯಾಗಲಿದೆ.
ಲೋಕಸಭೆ ಚುನಾವಣೆ 2024ರ ಫಲಿತಾಂಶದ ಬಳಿಕ ಮೊದಲ ಬಾರಿಗೆ ವಿಧಾನಮಂಡಲ ಕಲಾಪ ನಡೆಯುತ್ತಿದೆ. ಆದರೆ ಸದನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಯಾರು? ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಆದರೆ ಇಂದೇ ಜೆಡಿಎಸ್ ಶಾಸಕಾಂಗ ನಾಯಕನ ಹೆಸರು ನಿರ್ಧಾರವಾಗುತ್ತ ಎಂದು ಕಾದುನೋಡಬೇಕಾಗಿದೆ.
ಸದ್ಯಕ್ಕೆ ಜಿ ಟಿ ದೇವೇಗೌಡ, ಸುರೇಶ್ ಬಾಬು ಎರಡು ಹೆಸರುಗಳು ಚಾಲ್ತಿಯಲ್ಲಿವೆ. ಸುರೇಶ್ ಬಾಬು ಹೆಸರೇ ಅಂತಿಗೊಳ್ಳುವ ಸಾಧ್ಯತೆಯಿದ್ದು, ಇನ್ನು ಕೆಲವೇ ಹೊತ್ತಿನಲ್ಲಿ ಅಧಿಕೃತವಾಗಿ ಘೋಷಣೆ ಆಗಲಿದೆ.
ಇನ್ನೂ ಪರಿಷತ್ಗೂ ಇಂದೇ ಜೆಡಿಎಸ್ ಪಕ್ಷದ ನಾಯಕನ ಆಯ್ಕೆಯಾಗಿದೆ. ಪರಿಷತ್ನಲ್ಲಿ ಜೆಡಿಎಸ್ ಮುನ್ನಡೆಸುವ ಜವಾಬ್ದಾರಿ ಎಸ್ ಎಲ್ ಬೋಜೇಗೌಡ ಹೊರಲಿದ್ದಾರ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ ಎರಡೂ ಹೆಸರುಗಳನ್ನು ಕೆಲವೇ ಹೊತ್ತಿನಲ್ಲಿ ಘೋಷಣೆ ಮಾಡುವ ಮೂಲಕ ಈ ಪ್ರಶ್ನೆಗೆ ತೆರೆ ಬೀಳಲಿದೆ.
ಇದನ್ನೂ ಓದಿ : ಮುಂದುವರೆದ ವರುಣಾರ್ಭಟ – KRSಗೆ ಬಂತು ನೀರೇ ನೀರು.. ಇಂದಿನ ನೀರಿನ ಮಟ್ಟ ಎಷ್ಟಿದೆ ಗೊತ್ತಾ?