ಯಲಹಂಕ : ಯಲಹಂಕದಲ್ಲಿ ಮತ್ತೆ ಭೂ ಮಾಫಿಯಾ ಸದ್ದು ಕೇಳಿ ಬಂದಿದೆ. ಸೂರಿಗಾಗಿ ಇದೀಗ ದೇಶ ಕಾದಿದ್ದ ನೂರಾರು ಸೈನಿಕರು ಬೀದಿಗೆ ಬಂದಿದ್ದು, ಭೂ ಮಾಫಿಯಾ ಸಿಕ್ಕಿ ಹಿರಿಯ ನಾಗರಿಕರು ರೋಧನೆ ಅನುಭವಿಸುತ್ತಿದ್ದಾರೆ.
ಕೆಂಚೇನಹಳ್ಳಿ ಗ್ರಾಮದಲ್ಲಿರುವ ಸೈನಿಕ್ ವಿಹಾರ ಬಡವಾಣೆಯಲ್ಲಿ ಅವಾಂತರ ಸೃಷ್ಠಿಯಾಗಿದೆ. ಸರ್ವೇ ನಂಬರ್ 33/1, 33/3, 33/5, 34/2ರಲ್ಲಿ ಸಾರ್ವಜನಿಕರು ಸೈಟ್ ಖರೀದಿಸಿದ್ದರು. 10 ರಿಂದ 15 ಎಕರೆಗಳಲ್ಲಿ ಸೈನಿಕ್ ವಿಹಾರ ಲೇಔಟ್ ನಿರ್ಮಾಣವಾಗಿತ್ತು. ಆದರೆ ಇದೀಗ ಸರ್ಕಾರದ ಕಣ್ಣು ತಪ್ಪಿಸಿ ಕೋಟ್ಯಾಂತರ ಬೆಲೆಯ ಭೂಮಿ ಕಬಳಿಸಲು ಮೆಗಾ ಪ್ಲ್ಯಾನ್ ನಡೆದಿದೆ ಎಂದು ತಿಳಿದು ಬಂದಿದೆ.
ಸೈನಿಕ್ ವಿಹಾರ ಲೇಔಟ್ ಸೈಟ್ ಮಾಲೀಕರಿಗೆ BBMP ಸೈಟ್ ನಂಬರ್ ವಿತರಿಸಿತ್ತು. ಸರ್ಕಾರದ ಎಲ್ಲಾ ಸೌಲಭ್ಯ ಪಡೆದು ಸೈಟ್ ಮಾಲೀಕರು ಜೀವನ ಸಾಗಿಸುತ್ತಿದ್ದರು. ಆದರೆ ಅಕ್ರಮ ಬಡಾವಣೆ ನಿರ್ಮಾಣ ಎಂದು ಯಲಹಂಕ ತಹಶೀಲ್ದಾರ್ ಆದೇಶ ಹೊರಡಿಸಿದ್ದಂತೆ. ಆದೇಶ ಪ್ರಶ್ನಿಸಿ ಸೈನಿಕ್ ವಿಹಾರ ಸೈಟ್ ಮಾಲೀಕರು ಮೇಲ್ಮನವಿ ಸಲ್ಲಿಕೆ ಮಾಡದ್ದಾರೆ.
ಇದರ ನಡುವೆ ಅನಾಮಧೇಯ ವ್ಯಕ್ತಿಗಳಿಂದ ಸೈಟ್ ಮಾಲೀಕರಿಗೆ ಪ್ರಾಣ ಬೆದರಿಕೆ ಬಂದಿದ್ದು, ಏಕಾಏಕಿ ಬಂದು ವಾಸವಿದ್ದ ಕಟ್ಟಡಗಳನ್ನ ಭೂ ಮಾಫಿಯ ಹೊಡೆದುರಳಿಸಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪುಡಿ ರೌಡಿಗಳುಕೆಲ ಸೈಟ್ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ಇನ್ನು ಪ್ರಾಣ ರಕ್ಷಣೆಗಾಗಿ ಮತ್ತು ಜಾಗದ ರಕ್ಷಣೆಗಾಗಿ ಪರದಾಡುತ್ತಿರುವ ನಿವೇಶನದಾರರು, ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಪ್ರತಿಭಟಿಸುತ್ತಿದ್ದಾರೆ.
ಇದನ್ನೂ ಓದಿ : ಪ್ರತಿಷ್ಠಿತ ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ‘ಕೆರೆಬೇಟೆ’ ಸಿನಿಮಾ ಆಯ್ಕೆ..!