Download Our App

Follow us

Home » ರಾಜಕೀಯ » ಕುಮಾರಸ್ವಾಮಿಯೇ ಪೆನ್​ಡ್ರೈವ್​​​ ಲೀಕ್​ ಮಾಡಿರಬಹುದು : ಸಂಸದ ಡಿ.ಕೆ.ಸುರೇಶ್..!

ಕುಮಾರಸ್ವಾಮಿಯೇ ಪೆನ್​ಡ್ರೈವ್​​​ ಲೀಕ್​ ಮಾಡಿರಬಹುದು : ಸಂಸದ ಡಿ.ಕೆ.ಸುರೇಶ್..!

ಬೆಂಗಳೂರು : ಪ್ರಜ್ವಲ್​​ ಪೆನ್​ಡ್ರೈವ್​​ ಲೀಕ್​​ನಲ್ಲಿ ನಮ್ಮ ಕೈವಾಡ ಇಲ್ಲ. ಡಿಕೆಶಿಯವರಿಗೂ ಪೆನ್​ಡ್ರೈವ್​ಗೂ ಸಂಬಂಧ ಇಲ್ಲ. ಕುಮಾರಸ್ವಾಮಿಯೇ ಪೆನ್​ಡ್ರೈವ್​​​ ಲೀಕ್​ ಮಾಡಿರಬಹುದು. ಯಾಕಂದ್ರೆ ಪೆನ್​ಡ್ರೈವ್​​ ವಿಚಾರ ಅವರಿಗೇ ಮೊದಲು ಗೊತ್ತಿತ್ತು ಎಂದು ಹೇಳಿಕೆ ನೀಡುವ ಮೂಲಕ ಸಂಸದ ಡಿ.ಕೆ.ಸುರೇಶ್ ಬಿಗ್​ ಬಾಂಬ್ ಸಿಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣ ಸಂಬಂಧಿಸಿದಂತೆ ಹೆಚ್​ಡಿಕೆ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್​ ಅವರು, ಡಿಕೆಶಿ ನೆನಪಿಸಿಕೊಳ್ಳದಿದ್ರೆ ಹೆಚ್​ಡಿಕೆಗೆ ನಿದ್ದೆ ಬರಲ್ಲ, ತಿಂದಿದ್ದು ಜೀರ್ಣ ಆಗಲ್ಲ. ನಮಗೆ ಆ ಉದ್ದೇಶ ಇದ್ದಿದ್ರೆ ಎಲೆಕ್ಷನ್​ಗೆ 10 ದಿನ ಮುನ್ನವೇ ಲೀಕ್​ ಆಗ್ತಿತ್ತು ಎಂದು ಹರಿಹಾಯ್ದಿದ್ದಾರೆ.

ಇನ್ನು ಕೆಲವರು ತಮ್ಮ ಉಳಿವಿಗಾಗಿ ಡಿಕೆಶಿ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಸೂರಜ್ ರೇವಣ್ಣ ಡಿಕೆಶಿಯನ್ನು ಕೆಲಸ ಕಾರ್ಯಕ್ಕೆ ಭೇಟಿ ಆಗಿರಬಹುದು. ಶಾಸಕರ ಬಗ್ಗೆ ಬಂದಿರೋ ಆರೋಪದ ಬಗ್ಗೆ ಸಂತ್ರಸ್ತೆ ದೂರು ಕೊಡಲಿ. ಇಂಥಾ 108 ವಿಡಿಯೋಗಳಿವೆ, ಬಾಂಬೆ ಬ್ಲೂ ಬಾಯ್ಸ್ ವಿಡಿಯೋ ಇಲ್ವಾ..? ಯೋಗೇಶ್ವರ್ ಮಠ ಮಂದಿರಗಳಿಗೆಲ್ಲಾ ಅಲೆದಾಡಿದ್ಯಾಕೆ..? ನೂಲಿನಂತೆ ಸೀರೆ ಅಂತಾರಲ್ಲ ಅಂಥಾ ಪರಿಸ್ಥಿತಿ ಈಗಿದೆ. ಈ ಪ್ರಕರಣದ ಬಗ್ಗೆ  SIT ತನಿಖೆ ನಂತರ ಎಲ್ಲವೂ ಗೊತ್ತಾಗಲಿದೆ ಎಂದ ಡಿ.ಕೆ.ಸುರೇಶ್​ ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಎರಡು ಗಂಪುಗಳ ನಡುವೆ ಮಾರಾಮಾರಿ : ಅಸಲಿಗೆ ಆಗಿದ್ದೇನು ಗೊತ್ತಾ?

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಸವಾರ ದುರ್ಮರಣ..!

ಬೆಂಗಳೂರು : ನಗರದಲ್ಲಿ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಸವಾರ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್ 32 ವರ್ಷ ಅಪಘಾತದಲ್ಲಿ

Live Cricket

Add Your Heading Text Here