Download Our App

Follow us

Home » ರಾಜಕೀಯ » ಮಂಡ್ಯದಲ್ಲಿ ಮಾಜಿ ಸಿ.ಎಂ‌ ಹೆಚ್​ಡಿ ಕುಮಾರಸ್ವಾಮಿಗೆ ಮುನ್ನಡೆ..!

ಮಂಡ್ಯದಲ್ಲಿ ಮಾಜಿ ಸಿ.ಎಂ‌ ಹೆಚ್​ಡಿ ಕುಮಾರಸ್ವಾಮಿಗೆ ಮುನ್ನಡೆ..!

ಮಂಡ್ಯ : ಲೋಕಸಭಾ ಚುನಾವಣೆಯ ಫಲಿತಾಂಶ ರಣರೋಚಕವಾಗಿದ್ದು, ದೇಶಾದ್ಯಂತ ಮತಎಣಿಕೆ ಬಿರುಸಿನಿಂದ ನಡೆಯುತ್ತಾ ಇದೆ. ಯಾರ್ ಗೆಲ್ತಾರೆ? ಯಾರ್ ಸೋಲ್ತಾರೆ ಅನ್ನೋ ಕುತೂಹಲ ಮುಗಿಲು ಮುಟ್ಟಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌‍ನಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌‍ ಅಭ್ಯರ್ಥಿ ಸ್ಟಾರ್‌ ಚಂದ್ರುಗಿಂತ 1 ಲಕ್ಷಕ್ಕಿಂತಲೂ ಹೆಚ್ಚು ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಭಾರಿ ಮುನ್ನಡೆ ಹಿನ್ನಲೆ ಕುಮಾರಸ್ವಾಮಿ ಮಂಡ್ಯದತ್ತ ಆಗಮಿಸ್ತಿದ್ದಾರೆ. ಮಂಡ್ಯದಲ್ಲಿ ಕುಮಾರಸ್ಚಾಮಿ ಗೆಲುವು ಸನಿಹಕ್ಕೆ ಬಂದಿದ್ದು, ಗೆಲುವು ಖಚಿತವಾಗುತ್ತಿದ್ದಂತೆ ಬಿಡದಿಯ ತೋಟದ ಮನೆಯಿಂದ ಹೆಚ್​​ಡಿಕೆ ಮಂಡ್ಯದತ್ತ ಆಗಮಿಸುತ್ತಿದ್ದಾರೆ.

ಕುಮಾರಸ್ವಾಮಿ ಗೆಲುವು ಖಚಿತವಾಗ್ತಿದ್ದಂತೆ ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಯುತ್ತಿದೆ. ಹೆಚ್​​ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಜೊತೆ ಮಂಡ್ಯಕ್ಕೆ ಆಗಮಿಸ್ತಿದ್ದಾರೆ.

ಇದನ್ನೂ ಓದಿ : ಲೋಕಸಭೆ ಫಲಿತಾಂಶ : ಚಿಕ್ಕಬಳ್ಳಾಪುರ ಕ್ಷೇತ್ರದದಲ್ಲಿ ಮುನ್ನಡೆ ಕಾಯ್ದುಕೊಂಡ ಡಾ.ಕೆ.ಸುಧಾಕರ್..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಖಾಸಗಿ ಬಸ್ಸನ್ನೇ ಕದ್ದು ಎಸ್ಕೇಪ್ ಆಗಿರೋ ಖತರ್ನಾಕ್ ಕಳ್ಳರು..!

ಚಿತ್ರದುರ್ಗ : ಖಾಸಗಿ ಬಸ್​​ವೊಂದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಯಕನಹಟ್ಟಿ ಮೂಲದ SRE ಬಸ್ ಮಾಲೀಕ ಸಯ್ಯದ್

Live Cricket

Add Your Heading Text Here