Download Our App

Follow us

Home » ರಾಜಕೀಯ » ಕುಮಾರಸ್ವಾಮಿ ಫೈಲ್​​ ಇನ್ನೂ ರಾಜ್ಯಪಾಲರ ಮುಂದಿದೆ.. ಇನ್ನೂ ಯಾಕೆ ಪ್ರಾಸಿಕ್ಯೂಷನ್​ಗೆ​ ಅನುಮತಿ ನೀಡಿಲ್ಲ – ಡಾ.ಜಿ.ಪರಮೇಶ್ವರ್..!

ಕುಮಾರಸ್ವಾಮಿ ಫೈಲ್​​ ಇನ್ನೂ ರಾಜ್ಯಪಾಲರ ಮುಂದಿದೆ.. ಇನ್ನೂ ಯಾಕೆ ಪ್ರಾಸಿಕ್ಯೂಷನ್​ಗೆ​ ಅನುಮತಿ ನೀಡಿಲ್ಲ – ಡಾ.ಜಿ.ಪರಮೇಶ್ವರ್..!

ಬೆಂಗಳೂರು : ಕುಮಾರಸ್ವಾಮಿ ಫೈಲ್​​ ಇನ್ನೂ ರಾಜ್ಯಪಾಲರ ಮುಂದಿದೆ. ಹೆಚ್​ಡಿಕೆ ವಿರುದ್ಧದ ಪ್ರಾಸಿಕ್ಯೂಷನ್​ ಕೋರಿಕೆ ಇತ್ಯರ್ಥ ಆಗಿಲ್ಲ. ಈ ಪ್ರಕರಣದಲ್ಲಾದರೂ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡಬಹುದಿತ್ತು. ಇನ್ನೂ ಯಾಕೆ ಪ್ರಾಸಿಕ್ಯೂಷನ್​ಗೆ​ ಅನುಮತಿ ನೀಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ರಾಜ್ಯಪಾಲರು ಯಾವುದೇ ಫೈಲ್​​ ನನ್ನ ಮುಂದಿಲ್ಲ ಎಂದಿದ್ದಾರೆ. ಬಾಕಿ ಉಳಿಸಿಕೊಂಡಿಲ್ಲ, ಎಲ್ಲವನ್ನೂ ವಾಪಸ್ ಕಳಿಸಿದ್ದೇನೆ ಎಂದಿದ್ದಾರೆ. ತಮ್ಮ ಬಳಿ ಇರುವ ಹೆಚ್​ಡಿಕೆ ಫೈಲ್​ ಕ್ಲಿಯರ್​ ಮಾಡಬಹುದಿತ್ತು ಎಂದು ತಿಳಿಸಿದ್ದಾರೆ.

ಇನ್ನೂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಆತುರ ತೋರಿದ್ದರು. ವಿರೋಧ ಪಕ್ಷದವರ ಪ್ರಕರಣಗಳಲ್ಲಿ ಯಾಕೆ ಈ ಆತುರ ಇಲ್ಲ. ಕೋರ್ಟ್​ನಲ್ಲಿ ಏನ್​ ಆಗಲಿದೆ ಅನ್ನೋದನ್ನು ಕಾದು ನೋಡ್ತೇವೆ. ರಾಷ್ಟ್ರಪತಿಯವರನ್ನು ಭೇಟಿ ಮಾಡುವ ಬಗ್ಗೆ ಆನಂತರ ತೀರ್ಮಾನಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಇದನ್ನೂ ಓದಿ : ‘ಸಿಗ್ನಲ್‌ ಮ್ಯಾನ್‌ 1971ʼ ಚಿತ್ರದ ಹಾಡು ಲೋಕಾರ್ಪಣೆ ಮಾಡಿದ ಸಂಸದ ಯದುವೀರ್​​ ಒಡೆಯರ್​​..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here