Download Our App

Follow us

Home » ರಾಜಕೀಯ » ಕಾಂಗ್ರೆಸ್ ಸರ್ಕಾರದಿಂದ ಹಗಲು ದರೋಡೆ, ಬಸ್​ ದರ ಏರಿಸಿ ಗ್ಯಾರಂಟಿ ಕೊಟ್ರೆ ಏನ್​ ಪ್ರಯೋಜನ – ಹೆಚ್​​ಡಿಕೆ ಕಿಡಿ..!

ಕಾಂಗ್ರೆಸ್ ಸರ್ಕಾರದಿಂದ ಹಗಲು ದರೋಡೆ, ಬಸ್​ ದರ ಏರಿಸಿ ಗ್ಯಾರಂಟಿ ಕೊಟ್ರೆ ಏನ್​ ಪ್ರಯೋಜನ – ಹೆಚ್​​ಡಿಕೆ ಕಿಡಿ..!

ಮೈಸೂರು : ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡ್ತಿದೆ. ಮುದ್ರಾಂಕ, ಪೆಟ್ರೋಲ್​​-ಡೀಸೆಲ್​​​, ನೀರಿನ ದರ, ಹಾಲಿನ ದರ ಏರಿಕೆ ಯಾರಿಗೆ ಎಫೆಕ್ಟ್​. ಬಸ್​ ದರ ಏರಿಸಿ ಗ್ಯಾರಂಟಿ ಕೊಟ್ರೆ ಏನ್​ ಪ್ರಯೋಜನ, ತಿಂಗಳಿಗೆ 2000 ಕೊಟ್ಟು ಏನ್​ ಸಾಧನೆ ಮಾಡ್ತೀರಿ. ಅವರ ದುಡ್ಡು ಕಿತ್ಕೊಂದು ಅವರಿಗೆ ಕೊಡೋದು ಸಾಧನೆನಾ..? ಎಂದು ಬಸ್​ ಟಿಕೆಟ್ ದರ ಹೆಚ್ಚಳಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಹೆಚ್​.ಡಿ ಕುಮಾರಸ್ವಾಮಿ ಮಾತನಾಡಿ, ಮಾಂಸಕ್ಕೆ 500 ಕೊಡೋರು ಇದು ಕೊಡಲ್ವಾ. ಈ ಸರ್ಕಾರದವರಿಗೆ ಬಡವರ ಬಗ್ಗೆ ಕಾಳಜಿ ಇದೆಯಾ..? ಇಂಥಾ ದಿನಗಳನ್ನು ರಾಜ್ಯ ಯಾವತ್ತೂ ಕಂಡಿರಲಿಲ್ಲ. ಈ ಸರ್ಕಾರದಲ್ಲಿ 60 ಪರ್ಸೆಂಟ್​ ಕಮಿಷನ್​ ನಡೀತಿದೆ ಎಂದು ಹೆಚ್​​ಡಿಕೆ ಗಂಭೀರ ಆರೋಪ ಮಾಡಿದ್ದಾರೆ.

ಅವರ ಪಕ್ಷದ ಗುತ್ತಿಗೆದಾರರೇ ಇಂಥಾ ಆರೋಪ ಮಾಡಿದ್ರು. ವಸೂಲಿ ಸಿಸ್ಟಂ ಸಿಎಂ ಸಿದ್ದರಾಮಯ್ಯ ಅವ್ರಿಗೆ ಗೊತ್ತಿಲ್ವಾ..? ಇವತ್ತು ಮನೆ ಹಂಚಿಕೆಗೂ ದುಡ್ಡು ಕೊಡ್ಬೇಕು. ಈಗ ಮಂತ್ರಿಗಳಿಗೆ ಕೊಟ್ಟು ಮನೆ ರಿಲೀಸ್ ಮಾಡಿಸಬೇಕು. ಮಂತ್ರಿಗೆ ಪರ್ಸೆಂಟೇಜ್​​ ಕೊಟ್ಟು ಕಾಮಗಾರಿ ಹಣ ತರ್ಬೇಕು ಎಂದು ಕೆಂಡ ಕಾರಿದ್ದಾರೆ.

ಇದನ್ನೂ ಓದಿ : ಆನೇಕಲ್ : ಹೆತ್ತ ತಾಯಿಯನ್ನೇ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಮಗ..!

Leave a Comment

DG Ad

RELATED LATEST NEWS

Top Headlines

ಬೆಳ್ಳಂಬೆಳಗ್ಗೆ ನೇಪಾಳದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಬಿಹಾರ, ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ..!

ದೆಹಲಿ : ಇಂದು ಮುಂಜಾನೆ ನೇಪಾಳದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.1ರಷ್ಟು ದಾಖಲಾಗಿದೆ. ಭಾರತದ ಹಲವು ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದ್ದು, ಬಿಹಾರ,

Live Cricket

Add Your Heading Text Here