Download Our App

Follow us

Home » ಅಪರಾಧ » ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದ KSRTC ಡಿಸಿ..!

ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದ KSRTC ಡಿಸಿ..!

ವಿಜಯನಗರ : ವಿಜಯನಗರ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್​ ಜಗದೀಶ್‌ (KSRTC ಡಿಸಿ) ಹರಪನಹಳ್ಳಿಯ ಚಾಲಕ ಕಂ ಕಂಡಕ್ಟರ್​ ಬಳಿ ಲಂಚ ತೆಗೆದುಕೊಳ್ಳುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

 ಜಗದೀಶ್‌ KSRTC ಡಿಸಿ
ಜಗದೀಶ್‌ KSRTC ಡಿಸಿ

KSRTC ಡಿಸಿ ಜಗದೀಶ್ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಅಧಿಕಾರಿಯಾಗದ್ದಾನೆ. ಈತ ಡ್ರೈವರ್ ​​ಜೊತೆ ಸೇರಿಸಿಕೊಂಡು ಹಣದ ಡೀಲ್​ ಮಾಡಿದ್ದ. ಬುಧವಾರ ರಾತ್ರಿ ಹೊಸಪೇಟೆಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಚಾಲಕ ಕಂ ಕಂಡಕ್ಟರ್​ನಿಂದ​ ₹20 ಸಾವಿರ ಲಂಚ ಪಡೆಯುತ್ತಿದ್ದಾಗ ಖೆಡ್ಡಕ್ಕೆ ಬೀಳಿಸಿದ್ದಾರೆ.

ನಿರ್ವಾಹಕರ ಪ್ರಕರಣದಲ್ಲಿ ಇಲಾಖಾ ವಿಚಾರಣೆಯನ್ನು ಕೈಬಿಡಲು ಡಿಸಿ ಜಗದೀಶ್ 25 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಈ ಪೈಕಿ 5 ಸಾವಿರ ರೂ.ಗಳನ್ನು ಜಗದೀಶ್​ ಕಾರು ಚಾಲಕ ಮಲ್ಲಿಕಾರ್ಜುನ್​ ಮುಂಗಡವಾಗಿ ಪಡೆದಿದ್ದ. ಇನ್ನು ಉಳಿದ 20 ಸಾವಿರ ರೂ.ಗಳನ್ನು ಕೆಕೆಆರ್‌ಟಿಸಿ ಬಸ್‌ ನಿಲ್ದಾಣದ ಮೊದಲ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಜಗದೀಶ್‌ ಹಾಗೂ ಮಲ್ಲಿಕಾರ್ಜುನನ್ನು​ ಬಂಧಿಸಿದ್ದಾರೆ.

ಜಗದೀಶ್​ ಕಾರು ಚಾಲಕ ಮಲ್ಲಿಕಾರ್ಜುನ್
ಜಗದೀಶ್​ ಕಾರು ಚಾಲಕ ಮಲ್ಲಿಕಾರ್ಜುನ್

ಇದನ್ನೂ ಓದಿ : ವಿಜಯನಗರ : ನಿಶ್ಚಿತಾರ್ಥ ಮುಗಿಸಿ ವಾಪಸ್ ಆಗುತ್ತಿದ್ದಾಗ ಭೀಕರ ಅಪಘಾತ – ಓರ್ವ ಸಾವು, 10 ಮಂದಿಗೆ ಗಾಯ..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here